Home News ಎರಡು ಬೃಹತ್ ಗಾತ್ರದ ಹೆಬ್ಬಾವಿನೊಂದಿಗೆ ಈತನ ಹುಚ್ಚಾಟ !! | ಭುಜದ ಮೇಲೆ ಹೊತ್ತುಕೊಂಡು ಭರ್ಜರಿ...

ಎರಡು ಬೃಹತ್ ಗಾತ್ರದ ಹೆಬ್ಬಾವಿನೊಂದಿಗೆ ಈತನ ಹುಚ್ಚಾಟ !! | ಭುಜದ ಮೇಲೆ ಹೊತ್ತುಕೊಂಡು ಭರ್ಜರಿ ನೃತ್ಯ- ಭಯಾನಕ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಅದರಲ್ಲೂ ಹೆಬ್ಬಾವು ಎಂದರೆ ಇನ್ನೂ ಭಯ ಜಾಸ್ತಿ. ಹೀಗಿರುವಾಗ ಹೆಬ್ಬಾವಿನ ವಿಷಯ ಹೇಳುವುದಾದರೆ, ಅದು ಮನುಷ್ಯರನ್ನು ಸೇರಿದಂತೆ ಇತರ ಹಲವು ಪ್ರಾಣಿಗಳನ್ನು ಜೀವಂತವಾಗಿ ನುಂಗುತ್ತದೆ. ಹೀಗಾಗಿ ಹೆಬ್ಬಾವುಗಳಿಂದ ದೂರವಿರಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಆದರೆ, ಇದಕ್ಕೆ ವ್ಯತರಿಕ್ತ ಎಂಬಂತೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಎರಡು ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡಿರುವುದು ಕಾಣಬಹುದು. ಆದರೆ, ಎರಡು ಅಪಾಯಕಾರಿ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು, ವ್ಯಕ್ತಿ ಕೇವಲ ನಡೆದುಕೊಂಡು ಹೋಗುತ್ತಿಲ್ಲ. ಆತ ಮಾಡುತ್ತಿರುವುದನ್ನು ನೀವು ಊಹಿಸಲು ಕೂಡ ಸಾಧ್ಯವಿಲ್ಲ. ಆ ವ್ಯಕ್ತಿ ಈ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ನೃತ್ಯ ಮಾಡುತ್ತಿರುವುದನ್ನು ನೋಡಿದರೆ, ನಿಮಗೂ ಕೂಡ ಆಶ್ಚರ್ಯವಾಗಬಹುದು. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ವ್ಯಕ್ತಿಯ ಹುಚ್ಚುತನಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವೀಡಿಯೋ ಮಾಡುವ ಭರದಲ್ಲಿ ವ್ಯಕ್ತಿ ಎಷ್ಟೊಂದು ದೊಡ್ಡ ಅಪಾಯ ತೆಗೆದುಕೊಂಡಿದ್ದಾನೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ.

ಈ ವೈರಲ್ ವೀಡಿಯೋವನ್ನು ನೋಡಿ ನೀವೂ ಕೂಡ ಒಂದು ಕ್ಷಣ ನಿಮ್ಮ ಎರಡೂ ಕೈಗಳಿಂದ ನಿಮ್ಮ ತಲೆ ಹಿಡಿದುಕೊಳ್ಳುವಿರಿ. ವ್ಯಕ್ತಿ ಎರಡೂ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತು ನೃತ್ಯ ಮಾಡಲು ಆರಂಭಿಸುತ್ತಾನೆ. ವ್ಯಕ್ತಿ ತನ್ನ ಮುಖಕ್ಕೆ ಮಾಸ್ಕ್ ಧರಿಸಿದ್ದು, ಆತನ ತಲೆ ಮೇಲೆ ಟೋಪಿ ಕೂಡ ಇದೆ. ಆತ ಕೇವಲ ಎರಡೂ ಹೆಬ್ಬಾವುಗಳ ಮುಖಗಳನ್ನು ಮಾತ್ರ ತನ್ನ ಹೆಗಲ ಮೇಲೆ ಇಟ್ಟುಕೊಂಡಿದ್ದಾನೆ ಮತ್ತು ನಂತರ ನೃತ್ಯ ಮಾಡಲು ಆರಂಭಿಸುತ್ತಾನೆ.

ಈ ದೃಶ್ಯವನ್ನು ನೋಡಿದವರೆಲ್ಲರೂ ವ್ಯಕ್ತಿಗೆ ಹುಚ್ಚು ಎಂದು ಹೇಳುತ್ತಿದ್ದಾರೆ. ಆದರೆ, ವ್ಯಕ್ತಿ ಮಾತ್ರ ಎರಡೂ ಹೆಬ್ಬಾವುಗಳ ಜೊತೆ ಸುಲಭವಾಗಿ ಚೆಲ್ಲಾಟವಾಡುತ್ತಿದ್ದಾನೆ. ಸಾಮಾನ್ಯವಾಗಿ ನೀವು ಇಂತಹ ದೃಶ್ಯವನ್ನು ನಿಮ್ಮ ಜೀವನದಲ್ಲಿ ಎಂದೂ ನೋಡಿರಲಿಕ್ಕಿಲ್ಲ. world_of_snakes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ‘ವ್ಯಕ್ತಿ ತನ್ನ ಜೀವನಕ್ಕೆ ಬೇಸತ್ತು ಹೋಗಿದ್ದಾನೆ ಎಂಬಂತಿದೆ’ ಎಂದಿದ್ದಾರೆ.