ಕೊಳದಮಠದ ಶಾಂತವೀರ ಸ್ವಾಮೀಜಿಯವರು ಲಿಂಗೈಕ್ಯ

Share the Article

ನಗರದ ಶಾಂತಿನಗರದಲ್ಲಿರುವ ಕೊಳದಮಠದಲ್ಲಿದ ಶಾಂತವೀರ ಸ್ವಾಮೀಜಿಯವರು (80), ಇಂದು ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ವಾಕಿಂಗ್ ಕರೆದುಕೊಂಡು ಹೋಗಿದ್ದರು ರಾತ್ರಿ ತುಂಬಾ ಚೆನ್ನಾಗಿ ಮಾತನಾಡಿದ್ದರು. ಶಾಂತಿನಗರದಲ್ಲಿರುವ ಕೊಳದ ಮಠದಲ್ಲಿಶ್ರೀ ಶಾಂತವೀರ ಸ್ವಾಮೀಜಿಗಳು ಇಂದು ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.

ಇಂದು ಮುಂಜಾಗನ ಬಾಗಿಲು ತೆಗೆದಿರದ ಕಾರಣ, ಹೋಗಿ ನೋಡಿದಾಗ ಅವರಿಗೆ ಎಚ್ಚರವಿರಲಿಲ್ಲ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇದೀಗ ಅವರು ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ.

Leave A Reply