ಮುಂದಿನ ತಿಂಗಳು ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು!!ಸಾವಿಗೆ ಕಾರಣ ನಿಗೂಢ-ಠಾಣೆಯಲ್ಲಿ ಪ್ರಕರಣ ದಾಖಲು

Share the Article

ಮದುವೆ ನಿಶ್ಚಯವಾಗಿದ್ದ ಯುವತಿಯೊರ್ವಳು ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ನಡೆದಿದೆ. ಮೃತ ಯುವತಿಯನ್ನು ರಂಜಾನ್ ಸಾಬ್ ಎಂಬವರ ಪುತ್ರಿ ನಾಜನೀನ್ ಬಾನು(23) ಎಂದು ಗುರುತಿಸಲಾಗಿದೆ.

ಮುಂದಿನ ತಿಂಗಳು ಆಕೆಗೆ ಮದುವೆ ನಿಶ್ಚಯವಾಗಿದ್ದು,ಈ ಹಿನ್ನೆಲೆಯಲ್ಲಿ ಬಟ್ಟೆ ಖರೀದಿಗೆಂದು ಮನೆಯಿಂದ ತೆರಳಿದ್ದಳು. ಇತ್ತ ಸಂಜೆಯಾದರೂ ಮನೆಗೆ ಬಾರದೆ ಇದ್ದುದನ್ನು ಕಂಡ ಮನೆ ಮಂದಿ ಗಾಬರಿಗೊಂಡು ಎಲ್ಲೆಡೆ ಹುಡುಕಾಡಿದ್ದು, ಕೊನೆಗೆ ತಮ್ಮ ತೋಟದ ಮನೆಯಲ್ಲಿ ಹುಡುಕಾಟ ನಡೆಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಮನೆಯಲ್ಲಿನ ಬಡತನ, ಅನಾರೋಗ್ಯ ಪೀಡಿತ ತಂದೆ ಹಾಗೂ ಮನೆಯ ಖರ್ಚು ವೆಚ್ಚ ಇವುಗಳನ್ನೆಲ್ಲ ಮದುವೆ ನಂತರ ನಿಭಾಯಿಸುವುದು ಕಠಿಣ ಎಂದು ಕೊರಗಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

Leave A Reply