ಇಂದು ವಿಶ್ವ ನೃತ್ಯ ದಿನ; ತಿಳಿಯಿರಿ ಈ ಮುಖ್ಯ ಮಾಹಿತಿ

ವಿಶ್ವ ನೃತ್ಯ ದಿನಾಚರಣೆಯನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29ರಂದು  ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅನೇಕ ಕಡೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಡೆಯುತ್ತದೆ.

ಅಂತಾರಾಷ್ಟ್ರೀಯ ನೃತ್ಯದಿನವನ್ನು ಪ್ರಾರಂಭಿಸಿದ್ದು ಅಂತಾರಾಷ್ಟ್ರೀಯ ಥಿಯೇಟರ್​ ಇನ್​​ಸ್ಟಿಟ್ಯೂಟ್​ (ಐಐಟಿ)ನ ನೃತ್ಯ ಸಮಿತಿ. ಈ ಐಐಟಿ ಯುನೆಸ್ಕೋದ ಕಲಾಪ್ರದರ್ಶನಗಳ ಪ್ರಮುಖ ಪಾಲುದಾರನೂ ಹೌದು. 1982ರಿಂದಲೂ ಇದನ್ನೂ ಆಚರಿಸಿಕೊಂಡು ಬರಲಾಗುತ್ತಿದ್ದು, ನೃತ್ಯ ಪ್ರಕಾರದ ಮೌಲ್ಯ, ಪ್ರಾಮುಖ್ಯತೆಯನ್ನು ಅರಿತವರು ಈ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ತುಂಬ ಸಂಭ್ರಮದಿಂದ ಆಚರಿಸುತ್ತಾರೆ.

ಐಐಟಿಯ ನೃತ್ಯ ಸಮಿತಿ ಏಪ್ರಿಲ್​ 29ರಂದೇ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಫ್ರೆಂಚ್​ನ ಪ್ರಸಿದ್ಧ ನೃತ್ಯಗಾರ, ಆಧುನಿಕ ಬ್ಯಾಲೆ ನೃತ್ಯದ ಸೃಷ್ಟಿಕರ್ತ ಜೀನ್​ ಜಾರ್ಜಸ್​ ನೊವೆರೆ ಅವರ ಜನ್ಮದಿನ. ಜೀನ್​ ಅವರ ಗೌರವಾರ್ಥ ಪ್ರತಿವರ್ಷ ಏಪ್ರಿಲ್​ 29ರಂದು ಸಂಭ್ರಮಿಸಲಾಗುತ್ತದೆ.

Leave A Reply

Your email address will not be published.