ಚಂದನವನದ ತಾರಾಗೆ ಮಾತೃವಿಯೋಗ

Share the Article

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ತಾರಾ ಅವರ ತಾಯಿ ಇಂದು(ಏ.27) ನಿಧನರಾಗಿದ್ದಾರೆ. ತಾರಾ ಸಾಧನೆಗೆ ಅವರ ತಾಯಿ ಪುಷ್ಪಾ ಟಿ ಸದಾ ಬೆನ್ನೆಲುಬಾಗಿದ್ದರು. ತಾರಾ ಪ್ರತಿ ಶೂಟಿಂಗ್ ವೇಳೆ ಖುದ್ದು ಹಾಜರಿದ್ದು ಅವರಿಗೆ ಧೈರ್ಯ ನೀಡುತ್ತಿದ್ದರು.

76 ವರ್ಷದ ಪುಷ್ಪ ಟಿ ಆರೋಗ್ಯದಲ್ಲಿ ದಿಡೀರ್ ಏರುಪೇರಾದ ಕಾರಣ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧರಾಗಿದ್ದಾರೆ.

ನಟಿ ತಾರಾ ಅವರ ಜೊತೆ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್‌ನಲ್ಲಿ ಪುಷ್ಟ ಟಿ ಪಾಲ್ಗೊಂಡಿದ್ದರು. ಈ ವೇಳೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಪುಷ್ಪಾ ಟಿ ನಿಧನರಾಗಿದ್ದಾರೆ. ಮೈಸೂರುನಿಂದ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗುತ್ತಿದೆ.

Leave A Reply