ಬಸ್ ಸ್ಟ್ಯಾಂಡ್ ನಲ್ಲಿ ನೆಲದ ಮೇಲೆ ಬಿದ್ದು ಉರುಳಾಡಿ ಹೊಡೆದಾಡಿಕೊಂಡ ನಾರಿಯರ ತಂಡ !! | ಯುವತಿಯರ ಡಿಶುಮ್ ಡಿಶುಮ್ ವೀಡಿಯೋ ವೈರಲ್

Share the Article

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಜಗಳಕ್ಕಿಳಿದರೆ ಹೆಂಗಸರನ್ನು ಮೀರಿಸುವವರು ಯಾರೂ ಇಲ್ಲ. ಅಂತೆಯೇ ಬಸ್ ನಿಲ್ದಾಣವೊಂದರಲ್ಲಿ ಎರಡು ಗುಂಪಿನ ಕಾಲೇಜು ವಿದ್ಯಾರ್ಥಿನಿಯರ ನಡುವೆ ಜಗಳ ನಡೆದು ಅದು ಕೈ, ಕೈ ಮೀಲಾಸುವ ಹಂತ ತಲುಪಿದ ಘಟನೆ ಚೆನ್ನೈ ನಗರದಲ್ಲಿ ನಡೆದಿದ್ದು, ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಮಂಗಳವಾರ ಉತ್ತರ ಚೆನ್ನೈನ ನ್ಯೂ ವಾಷರ್‍ಮನ್‍ಪೇಟ್‍ನ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಎರಡು ಗುಂಪಿನ ವಿದ್ಯಾರ್ಥಿನಿಯರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಮಾತಿಗೆ ಮಾತು ಬೆಳೆದು ಎರಡು ಗುಂಪಿನ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಅಕ್ಕಪಕ್ಕದಲ್ಲಿ ಜನರು ನೆರೆದಿರುವುದನ್ನು ಪರಿಗಣಿಸದೇ ಸಾರ್ವಜನಿಕವಾಗಿ ವಿದ್ಯಾರ್ಥಿನಿಯರು ನೆಲದ ಮೇಲೆ ಬಿದ್ದು ಉರುಳಾಡಿ ಒಬ್ಬರಿಗೊಬ್ಬರು ಬಡಿದಾಡಿದ್ದಾರೆ. ಇವರನ್ನು ಬಿಡಿಸಲು ಯಾರಿಗೂ ಸಹ ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿನಿಯರು ಹೊಡೆದಾಡುತ್ತಿರುವುದನ್ನು ಕಂಡು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿದ್ದಾರೆ. ನಂತರ ಈ ರೀತಿ ಮತ್ತೆ ಘಟನೆ ಸಂಭವಿಸಬಾರದು ಎಂದು ವಾರ್ನ್ ಮಾಡಿ ಬಿಟ್ಟುಕಳುಹಿಸಿದ್ದಾರೆ.

Leave A Reply