ಮಂಗಳೂರು : ಕಾರಿನ ಮೇಲೆ ಬಿದ್ದ ಕಟೌಟ್ !

Share the Article

ಮಂಗಳೂರು: ಬೃಹತ್ ಗಾತ್ರದ ಕಟೌಟ್ ಗಾಳಿಗೆ ಹಾರಿ ಎರಡು ಕಾರುಗಳ ಮೇಲೆ ಬಿದ್ದ ಘಟನೆಯೊಂದು
ನಗರದ ಟೌನ್ ಹಾಲ್ ಬಳಿ ನಡೆದಿದೆ. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ತೆರವೊಳಿಸಿದ್ದಾರೆ.

ಏ.27ರಿಂದ ಏ.30ರವರೆಗೆ ಮಂಗಳೂರು ಟೌನ್ ಹಾಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆ ನಡೆಯಲಿದೆ. ಈ ಕಾರಣದಿಂದ ಕ್ಲಾಕ್ ಟವರ್ ಬಳಿ ಅಳವಡಿಸಿದ್ದ 40×20 ಬೃಹತ್ ಗಾತ್ರದ ಕಟೌಟ್ ನ್ನು ಹಾಕಲಾಗಿತ್ತು. ಹಾಕಿದ ಅರ್ಧ ಗಂಟೆಯಲ್ಲೇ ಗಾಳಿಗೆ ಹಾರಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಎರಡು ಕಾರುಗಳ ಮೇಲೆ ಬಿದ್ದಿದೆ.

ಅದೃಷ್ಟವಶಾತ್ ಪಾರ್ಕ್ ಮಾಡಿದ ಕಾರಿನಲ್ಲಿ ಯಾರೂ ಇರಲಿಲ್ಲ. ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಕಟೌಟ್ ಅಡಿ ಇದ್ದ ವಾಹನ ತೆರವುಗೊಳಿಸಿದ್ದಾರೆ. ಕಟೌಟ್ ಬಿದ್ದ ಪರಿಣಾಮ ಕೆಲಕಾಲ ಕ್ಲಾಕ್ ಟವರ್ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು.

Leave A Reply