ಜೂನ್ ವೇಳೆಗೆ ಅಧಿಕವಾಗಲಿದೆ ಕೊರೋನ ವೈರಸ್|ತುರ್ತು ಸಂದರ್ಭಗಳಲ್ಲಿ 6 ರಿಂದ 12 ವರ್ಷದ ಮಕ್ಕಳಿಗೆ ಭಾರತ್‌ ಬಯೋಟೆಕ್‌ ನ ಕೋವ್ಯಾಕ್ಸಿನ್‌ ಬಳಸಬಹುದೆಂದು ಗ್ರೀನ್‌ ಸಿಗ್ನಲ್

ಕೊರೊನಾ ನಾಲ್ಕನೇ ಆಲೆ ದೇಶದಲ್ಲಿ ಈಗಾಗಲೇ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಜೂನ್‌ ವೇಳೆಗೆ ಸೋಂಕು ಅಧಿಕವಾಗಲಿರುವ ಕಾರಣ ಭಾರತ್‌ ಬಯೋಟೆಕ್‌ ನ ಕೋವ್ಯಾಕ್ಸಿನ್‌ ಬಳಸಬಹುದೆಂದು ಹೇಳಿದೆ.

ನಾಲ್ಕನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಭಾರತೀಯ ಔಷಧ ಮಹಾನಿಯಂತ್ರಕರ ಕಚೇರಿ (ಡಿಸಿಜಿಐ) ತುರ್ತು ಸಂದರ್ಭಗಳಲ್ಲಿ 6 ರಿಂದ 12 ವರ್ಷದ ಮಕ್ಕಳಿಗೆ ಭಾರತ್‌ ಬಯೋಟೆಕ್‌ ನ ಕೋವ್ಯಾಕ್ಸಿನ್‌ ಬಳಸಬಹುದೆಂದು ಗ್ರೀನ್‌ ಸಿಗ್ನಲ್‌ ನೀಡಿದೆ.ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ಗಳನ್ನು ನೀಡಲಾಗುತ್ತಿದ್ದು, ಇದನ್ನು ಪಡೆಯುವುದರ ಮೂಲಕ ನಾಲ್ಕನೇ ಅಲೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.