Home latest ಶಾಲೆಯಲ್ಲಿಯೇ ಪ್ರಾಂಶುಪಾಲ-ಶಿಕ್ಷಕಿ ಮಧ್ಯೆ ಲೈಂಗಿಕ ಕ್ರಿಯೆ | ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು!

ಶಾಲೆಯಲ್ಲಿಯೇ ಪ್ರಾಂಶುಪಾಲ-ಶಿಕ್ಷಕಿ ಮಧ್ಯೆ ಲೈಂಗಿಕ ಕ್ರಿಯೆ | ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು!

Hindu neighbor gifts plot of land

Hindu neighbour gifts land to Muslim journalist

ಮಕ್ಕಳಿಗೆ ಪಾಠ ಹೇಳಿಕೊಟ್ಟು, ಸನ್ಮಾರ್ಗದ ಪಾಠ ಹೇಳಿ ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುವ ಹೊಣೆ ಇರುವ ಪ್ರಾಧ್ಯಾಪಕರುಗಳೇ, ಅದನ್ನೆಲ್ಲ ಮರೆತು ಕಾಲೇಜಿನಲ್ಲೇ ಲೈಂಗಿಕ ಕ್ರಿಯೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಘಟನೆ ನಡೆದಿರುವುದು ಛತ್ತೀಸ್‌ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ. ಪ್ರಾಂಶುಪಾಲ ಮತ್ತು ಶಿಕ್ಷಕಿ ಮಧ್ಯೆ ಈ ಸಂಭೋಗ ಕ್ರಿಯೆ ನಡೆದಿದೆ.

ಪ್ರಾಂಶುಪಾಲನಿಗೆ ಮದುವೆ ಆಗಿ ಪತ್ನಿ ಇದ್ದರೂ ಶಾಲೆಯಲ್ಲಿ ಶಿಕ್ಷಕಿ ಜೊತೆ ಅನೈತಿಕ ಸಂಬಂಧ ಇತ್ತು. ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಕಾಮಚೇಷ್ಟೆ ನಡೆಸುತ್ತಿದ್ದ. ಇದನ್ನು ಗಮನಿಸಿದ್ದ ಗ್ರಾಮಸ್ಥರು ರೆಡ್‌ಹ್ಯಾಂಡ್ ಆಗಿ ಹಿಡಿಯಲು ಪ್ಲ್ಯಾನ್ ಮಾಡಿದ್ದರು. ಇತ್ತೀಚಿಗೆ ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪಾಂಶುಪಾಲ ಲೈಂಗಿಕ ಕ್ರಿಯೆ ನಡೆಸುತ್ತಿದ್ದದ್ದು ಗ್ರಾಮಸ್ಥರಿಗೆ ಗೊತ್ತಾಗಿದೆ. ಕೂಡಲೇ ಅವರಿಗೆ ಗೊತ್ತಾಗದಂತೆ ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಶಾಲೆಗಳು ಬಂದ್ ಆಗಿದ್ದರೂ ಶಾಲೆಗೆ ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿ ಬರುತ್ತಿದ್ದು, ಆವಾಗ ಈ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ. ಶಾಲೆ ಆರಂಭವಾದಗಲೂ ಇವರಿಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು.

ಹಾಗಾಗಿ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಈ ಹಿಂದೆಯೇ ಪ್ರಾಂಶುಪಾಲನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಪ್ರಾಂಶುಪಾಲ ತನ್ನ ಕಾಮದಾಟ ಮುಂದುವರಿಸಿದ್ದ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ವ್ಯಕ್ತಿಗೆ ವೈರಲ್ ಮಾಡದಂತೆ ಹಣದ ಆಮಿಷವನ್ನೂ ಪ್ರಾಂಶುಪಾಲ ಒಡ್ಡಿದ್ದ. ಗ್ರಾಮಸ್ಥರು ಪ್ರಾಂಶುಪಾಲರ ವಿರುದ್ಧ ಜಿಲ್ಲಾಧಿಕಾರಿ ಚಂದನ್‌ಕುಮಾರ್‌ಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಲೆ ಆಡಳಿತ ಮಂಡಳಿಯು ವಿಚಾರಣೆ ನಡೆಸಿತ್ತು. ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದು, ಪ್ರಾಂಶುಪಾಲನನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಮಾನತು ಮಾಡಲಾಗಿದೆ.