ಬಿಜೆಪಿ 40 ರಿಂದ 104 ಸ್ಥಾನ ಪಡೆಯುವಲ್ಲಿ ಕುಮಾರಸ್ವಾಮಿ ಶ್ರಮ ಬಹಳ ಹೆಚ್ಚು – ಹೆಚ್ ಡಿ ರೇವಣ್ಣ

Share the Article

ರಾಜ್ಯದಲ್ಲಿ ಬಿಜೆಪಿಯು 40 ರಿಂದ 104 ಸ್ಥಾನ ಪಡೆಯಲು ಕುಮಾರಸ್ವಾಮಿ ಕಾರಣ ಎಂದು ಹಾಗೆನೇ ಕುಮಾರಸ್ವಾಮಿಯವರು ಧರ್ಮರಾಯನಿದ್ದಂತೆ ಎಂದು ‘ಜನತಾ ಜಲಧಾರ’ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಈ ಮಾತನ್ನು ಹೇಳಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಯಾರೇನು ಕೇಳಿದರೂ ಬರೆದುಕೊಡುತ್ತಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದವರು ಕುಮಾರಸ್ವಾಮಿಯಿಂದ ಲಾಭ ಪಡೆದುಕೊಂಡಿದ್ದಾರೆ. ಬಿಜೆಪಿ ಸ್ಥಾನ ಪಡೆಯುವಲ್ಲಿ ಕುಮಾರಸ್ವಾಮಿಯವರ ಶ್ರಮ ತುಂಬಾ ಇದೆ. ಇದಕ್ಕಾಗಿ ಮಾಜಿ ಸಿಎಂ ಬಿಎಸ್‌ವೈ ಅವರು ಕುಮಾರಸ್ವಾಮಿಯವರ ಫೋಟೋ ಹಾಕಿಕೊಳ್ಳಬೇಕು ಎಂದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದಾಗಿ ಕೋಡಿಮಠದ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಖಂಡಿತಾ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಎಚ್.ಡಿ. ರೇವಣ್ಣ ತಿಳಿಸಿದರು.

Leave A Reply