ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ 15 ಅಡಿ ಕೆಳಕ್ಕೆ ಮನೆಯಂಗಳಕ್ಕೆ ಬಿದ್ದ ರಿಕ್ಷಾ |ಚಾಲಕ ಸಹಿತ ನಾಲ್ವರಿಗೆ ಗಾಯ!

Share the Article

ರಸ್ತೆಯಿಂದ ಮನೆಯ ಅಂಗಳಕ್ಕೆ ಆಟೋ ರಿಕ್ಷಾವೊಂದು
ಉರುಳಿ ಬಿದ್ದ ಘಟನೆಯೊಂದು ಮುಂಡಾಜೆ ಕಲ್ಮಂಜೆ ಸಂಪರ್ಕ ರಸ್ತೆಯ ಬಲ್ಯಾರ್ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ರಿಕ್ಷಾ ಉರುಳಿ ಬಿದ್ದ ರಭಸಕ್ಕೆ ಚಾಲಕ ಸಹಿತ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಉಪ್ಪಿನಂಗಡಿ ಕರಾಯದ ಮೂವರು ವ್ಯಕ್ತಿಗಳು ಕುಂಜದ ಒಂಜರೆಬೈಲು ಪರಿಸರದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಿರಿದಾದ ರಸ್ತೆಯಲ್ಲಿ ಬಲ್ಯಾರ್ ಕಾಪು ಬಳಿ ತಿರುವಿನಲ್ಲಿ ರಿಕ್ಷಾ ಚಾಲಕನ ನಿಯಂತ್ರಣ ಕಳೆದುಕೊಂಡು ಮನೆಯೊಂದರ 15 ಅಡಿ ಆಳದ ಅಂಗಳಕ್ಕೆ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ರಿಕ್ಷಾ ನಜ್ಜುಗುಜ್ಜಾಗಿದೆ.

ತಕ್ಷಣ ಗಾಯಾಳುಗಳನ್ನು ಮನೆಯವರು ಮತ್ತು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಗಾಯಾಳುಗಳಿಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Leave A Reply