ಶಿಕ್ಷಕನಿಗೇ ಹೊಡೆಯಲು ಕೈ ಎತ್ತಿದ ವಿದ್ಯಾರ್ಥಿ ; ನಿದ್ದೆ ಮಾಡುತ್ತಿದ್ದವನನ್ನು ಎಚ್ಚರಗೊಳಿಸಿದ್ದೇ ತಪ್ಪಾಯಿತೇ ?

Share the Article

ಒಂದು ಕಾಲವಿತ್ತು. ವಿದ್ಯಾರ್ಥಿಗಳು ಶಿಕ್ಷಕರನ್ನು ಕಂಡರೆ ಭಯ ಭಕ್ತಿಯಿಂದ ಕಾಣುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಭಯ ಭಕ್ತಿ ಬಿಡಿ, ಹೊಡೆಯೋಕೇ ಮುಂದಾಗಿರುವ ಘಟನೆ ನಡೆಯುತ್ತದೆ. ಅಂಥದ್ದೇ ಒಂದು ಘಟನೆ ಇಲ್ಲೊಂದು ಶಾಲೆಯಲ್ಲಿ ನಡೆದಿದೆ.

ಈ ಶಾಲೆಯ ಮೂವರು ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ನಿಂದಿಸಿದ್ದಲ್ಲದೇ, ಹಲ್ಲೆಗೆ ಯತ್ನಿಸಿದ್ದು, ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ತಮಿಳುನಾಡಿನ ಮದನೂರ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಸಸ್ಯಶಾಸ್ತ್ರದ ಶಿಕ್ಷಕ ಸಂಜಯ್ ಗಾಂಧಿ ಅವರು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ದಾಖಲೆ ಪುಸ್ತಕಗಳನ್ನು ಸಲ್ಲಿಸುವಂತೆ ಹೇಳಿದರು. ಈ ವೇಳೆ ತರಗತಿಯ ವಿದ್ಯಾರ್ಥಿಯಾದ ಮಾರಿ ಎಂದು ಗುರುತಿಸಲಾದ ಹುಡುಗ ನಿದ್ರಿಸುತ್ತಿರುವುದನ್ನು ಕಂಡು ಶಿಕ್ಷಕನು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಯು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ್ದಾನೆ. ಅಷ್ಟೇ ಅಲ್ಲದೇ ಶಿಕ್ಷಕನ ಮೇಲೆ ಹಲ್ಲೆ ನಡೆಸಲು ಕೈಗಳನ್ನು ಮೇಲಕ್ಕೆತ್ತಿರುವ ದೃಶ್ಯ ಕಂಡುಬಂದಿದೆ.

ಘಟನೆ ಬೆಳಕಿಗೆ ಬಂದ ಕೂಡಲೇ ಕಂದಾಯ ಅಧಿಕಾರಿಗಳು, ಆರ್‌ಡಿಒ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಶಿಕ್ಷಕ ಮತ್ತು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ನಂತರ, ವೀಡಿಯೊದಲ್ಲಿ ಕಂಡುಬರುವ ಇಬ್ಬರು ವಿದ್ಯಾರ್ಥಿಗಳು ಮತ್ತು ಘಟನೆಯಲ್ಲಿ ಸಹಚರ ಎಂದು ಪರಿಗಣಿಸಲಾದ ಮೂರನೇ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ.

Leave A Reply