Home Jobs ಐಟಿ ದಿಗ್ಗಜನಿಂದ ಇದೆಂಥಾ ನೌಕರ ದ್ರೋಹಿ ಕೃತ್ಯ ?! | ಇನ್ಮುಂದೆ ಇನ್ಫೋಸಿಸ್ ಬಿಟ್ರೆ ಮುಂದಿನ...

ಐಟಿ ದಿಗ್ಗಜನಿಂದ ಇದೆಂಥಾ ನೌಕರ ದ್ರೋಹಿ ಕೃತ್ಯ ?! | ಇನ್ಮುಂದೆ ಇನ್ಫೋಸಿಸ್ ಬಿಟ್ರೆ ಮುಂದಿನ 6 ತಿಂಗಳು ಬೇರೆಲ್ಲೂ ಕೆಲಸ ಮಾಡೋ ಹಾಗಿಲ್ಲ

Hindu neighbor gifts plot of land

Hindu neighbour gifts land to Muslim journalist

ಐಟಿ ಉದ್ಯೋಗಿಗಳಿಗೊಂದು ಶಾಕಿಂಗ್ ನ್ಯೂಸ್ ಇದೆ. ಅದು ಕೂಡ ನೀವೇನಾದರೂ ಈ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕಥೆ ಮುಗಿದೇ ಹೋಯಿತು. ಯಾವುದೋ ಕಠಿಣ ಪರಿಸ್ಥಿತಿಗೆ ಸಿಲುಕಿ ಒಂದು ವೇಳೆ ರಾಜೀನಾಮೆ ನೀಡಿದರೆ ಮುಂದಿನ 6 ತಿಂಗಳು ಮನೆಯಲ್ಲೇ ಕೂರಬೇಕಾಗುತ್ತದೆ !!

ಹೌದು. ಉದ್ಯೋಗಿಗಳು ಒಂದು ಕಂಪೆನಿ ತೊರೆದರೆ, ಮುಂದಿನ 6 ತಿಂಗಳ ಕಾಲ ಪ್ರತಿಸ್ಪರ್ಧಿ ಕಂಪೆನಿಗೆ ಸೇರುವಂತಿಲ್ಲ ಎಂಬ ಹೊಸ ನಿಯಮವನ್ನು ಐಟಿ ದಿಗ್ಗಜ ಇನ್ಫೋಸಿಸ್ ಜಾರಿ ಮಾಡಿದೆ.‌ ಪ್ರತಿಭಾ ಪಲಾಯನವನ್ನು ತಪ್ಪಿಸುವ ಸಲುವಾಗಿ ಕಂಪೆನಿ ಈ ತಂತ್ರದ ಮೊರೆ ಹೋಗಿದೆ. ಸಾಫ್ಟ್‌ವೇರ್ ಮತ್ತು ಬಿಪಿಒ ಕ್ಷೇತ್ರದಲ್ಲಿ ಕಂಪೆನಿಯಿಂದ ಕಂಪೆನಿಗೆ ಹಾರುವವರ ಸಂಖ್ಯೆ ಹೆಚ್ಚಳವಾಗಿದ್ದು, ಅದಕ್ಕೆ ಕಡಿವಾಣ ಹಾಕುವ ಸಲುವಾಗಿ ಉದ್ಯೋಗಿಗಳ ಆಫರ್ ಲೆಟರ್ ನಲ್ಲೇ ಈ ಷರತ್ತನ್ನು ವಿಧಿಸಲಾಗುತ್ತಿದೆ.

ಆದರೆ ಇನ್ಫೋಸಿಸ್‌ನ ಈ ಕ್ರಮಕ್ಕೆ ಉದ್ಯೋಗಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಬಿಪಿಒ ಮತ್ತು ಐಟಿ ಉದ್ಯೋಗಿಗಳ ಸಂಘ, ನೇಸೆಂಟ್ ಇನ್ಸಾರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೇಟ್ (ನೈಟ್ಸ್) ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ.

ಆಫರ್ ಲೆಟರ್‌ನಲ್ಲಿ, “ರಾಜೀನಾಮೆಗೆ ಮುನ್ನ 12 ತಿಂಗಳ ಕಾಲ ನೀವು ಯಾವ ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡಿದ್ದೀರೋ, ಅದೇ ಕ್ಲೈಂಟ್‌ಗಳನ್ನು ಹೊಂದಿರುವ ಬೇರೆ ಪ್ರತಿಸ್ಪರ್ಧಿ ಕಂಪೆನಿಯಲ್ಲಿ ಮುಂದಿನ 6 ತಿಂಗಳ ಕಾಲ ಕೆಲಸಕ್ಕೆ ಸೇರುವಂತಿಲ್ಲ” ಎಂದು ನಮೂದಿಸಲಾಗಿದೆ. ಈ ಮೂಲಕ ಉದ್ಯೋಗಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿಯಲಾಗಿದೆ. ಟಿಸಿಎಸ್, ಆಯಕ್ಸೆಂಚರ್, ಐಬಿಎಂ, ಕಾಗ್ರೆಜೆಂಟ್, ವಿಪ್ರೋ, ಟೆಕ್ ಮಹೀಂದ್ರಾ, ಜೆನ್‌ಪ್ಯಾಕ್ಟ್ ಮತ್ತು ಎಚ್‌ಸಿಎಲ್‌ಗಳನ್ನು ಪ್ರತಿಸ್ಪರ್ಧಿ ಕಂಪೆನಿಗಳೆಂದು ನಮೂದಿಸಲಾಗಿದೆ.

ಜಗತ್ತಿನ ಬಹುಭಾಗಗಳಲ್ಲಿ ಇಂಥದ್ದೊಂದು ನಿಯಮವನ್ನು ಅನುಸರಿಸಲಾಗುತ್ತದೆ. ಮಾಹಿತಿಗಳ ಗೌಪ್ಯತೆ ಕಾಪಾಡಿಕೊಳ್ಳಲು, ಗ್ರಾಹಕರೊಂದಿಗಿನ ಸಂಪರ್ಕ ಮತ್ತು ಇತರೆ ನ್ಯಾಯಯುತ ಉದ್ದಿಮೆ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಈ ನಿಯಮ ಮಾಡಲಾಗಿದೆ. ಕಂಪೆನಿಗೆ ಸೇರುವ ಮೊದಲೇ ಪ್ರತಿಯೊಬ್ಬರಿಗೂ ಈ ನಿಯಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಇನ್ಫೋಸಿಸ್ ಸ್ಪಷ್ಟಪಡಿಸಿದೆ.

ಜನವರಿಯಿಂದ ಮಾರ್ಚ್‌ವರೆಗಿನ 3 ತಿಂಗಳಲ್ಲಿ ಶೇ.17.4ರಷ್ಟು ಉದ್ಯೋಗಿಗಳು ಟಿಸಿಎಸ್ ಕಂಪೆನಿ ತೊರೆದಿದ್ದಾರೆ. ಆದರೆ ಇನ್ಫೋಸಿಸ್‌ನ 80 ಸಾವಿರಕ್ಕೂ ಹೆಚ್ಚು ಮಂದಿ (ಶೇ.27.7) ಕೆಲಸ ಬಿಟ್ಟಿದ್ದಾರೆ. ಇನ್ಫೋಸಿಸ್ ನ ಈ ನಡೆಯ ಕುರಿತು ಕೇಂದ್ರ ಕಾರ್ಮಿಕ ಸಚಿವಾಲಯ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.