ಕೊನೆಗೂ ಪತ್ತೆಯಾಯಿತು ಕೊರೋನಾ ವೈರಸ್ ನ ಮೂಲ !! | ಈ ಪ್ರಾಣಿಗೆ ಹೋಲುವ ಜೀವಿಯಲ್ಲಿತ್ತಂತೆ ವೈರಸ್

Share the Article

ಇಡೀ ಜಗತ್ತನ್ನೇ ಭಯಭೀತಗೊಳಿಸಿದ ಕೊರೋನಾ ವೈರಸ್ ನ ಕುರಿತು ಯಾವುದೇ ಮಾಹಿತಿ ಇದುವರೆಗೂ ಪತ್ತೆಯಾಗಿರಲಿಲ್ಲ.ಈ ವೈರಸ್ ಎಲ್ಲಿಂದ ಬಂದಿದೆ? ಹೇಗೆ ಇದೆ? ಎಂಬ ಸುಳಿವೇ ಇಲ್ಲದೆ ಜನರೆಲ್ಲರೂ ತನ್ನ ಪ್ರಾಣ ರಕ್ಷಣೆಗಾಗಿ ಅದೆಷ್ಟೋ ಸರ್ಕಾರ ಜಾರಿಗೊಳಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ.ಆದರೆ ಇದೀಗ ಜನರ ಜೀವನದಲ್ಲಿ ಚೆಲ್ಲಾಟವಾಡಿದ ಆ ಒಂದು ಕೊರೋನ ವೈರಸ್ ನ ಕುರಿತು ಸತತ ಎರಡು ವರ್ಷಗಳ ಬಳಿಕ ಮಾಹಿತಿ ಬಹಿರಂಗವಾಗಿದೆ.

ಈ ಮೊದಲು ನಾಲ್ವರು ಅಮೆರಿಕನ್ನರಿಗೆ ಮೊದಲ ಬಾರಿಗೆ ಪ್ರಾಣಿಯಿಂದ ಕೊರೋನಾ ಸೋಂಕು ತಗುಲಿತ್ತು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ದೃಢಪಡಿಸಿತ್ತು. ಆದರೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ.ಇದೀಗ ಕೊನೆಗೂ ಸೋಂಕು ಎಲ್ಲಿಂದ ಸೃಷ್ಟಿಯಾಯಿತು ಎಂಬುದು ಪತ್ತೆಯಾಗಿದೆ.

2020ರಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು,ಈ ವೇಳೆ ಮುಂಗುಸಿಯಂತಹ ಪ್ರಾಣಿಯಲ್ಲಿ ಕೊರೋನಾ ಪತ್ತೆಯಾಗಿತ್ತು. ಈ ವೇಳೆ ಇದರಿಂದಲೇ ಹರಡಿದೆಯೇ ಎಂಬುದು ಮಾತ್ರ ಗೊಂದಲವಾಗಿತ್ತು.ಆದರೀಗ ಇದು ದೃಢವಾಗಿದೆ.

ಹೌದು.ಮೊಟ್ಟ ಮೊದಲ ಬಾರಿಗೆ ಈ ಪ್ರಾಣಿಗಳಲ್ಲೇ ಕೋವಿಡ್​ ಸೋಂಕು ಕಾಣಿಸಿಕೊಂಡಿತ್ತು. ಈ ಪ್ರಾಣಿಗಳನ್ನು ಸಾಕುವ ಸಂಗ್ರಹಾಲಯದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿಗೆ ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಸತ್ಯ ಬಯಲಾಗಿದೆ.ಈ ಪ್ರಾಣಿಗಳನ್ನು ಸಾಕುತ್ತಿದ್ದ ಸ್ಥಳದಿಂದ ಇತರೆ ಪ್ರಾಣಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆದರೆ ಮುಂಗುಸಿಯಂತಹ ಪ್ರಾಣಿಯಲ್ಲೇ ಕೊರೊನಾ ಸೋಂಕಿರುವುದು ಎಂದು ಪತ್ತೆಯಾಗಿದೆ.

ಈಗಾಗಲೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿರುವ ವೈರಸ್​ಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಇದು ಸ್ಪಷ್ಟವಾಗಿದ್ದು, ನೆದರ್​ಲ್ಯಾಂಡ್​ನಲ್ಲೂ ಕೂಡ ಇದೇ ಪ್ರಾಣಿಯಲ್ಲಿ ವೈರಸ್​ ಪತ್ತೆಯಾಗಿದೆ ಎಂದು ಸಿಡಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave A Reply