Home News ಉಡುಪಿ ಉಡುಪಿ: ಮುತಾಲಿಕ್ ಆಗಮನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ

ಉಡುಪಿ: ಮುತಾಲಿಕ್ ಆಗಮನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ

Hindu neighbor gifts plot of land

Hindu neighbour gifts land to Muslim journalist

ಉಡುಪಿ ಜಿಲ್ಲಾ ಪ್ರವೇಶಕ್ಕೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ನೀಡಿದ ಪ್ರಸಂಗ ಬೆಳಕಿಗೆ ಬಂದಿದೆ.

ಮುತಾಲಿಕ್ ನಿಷೇಧ ಹೇರಿರುವ ಸಂಬಂಧ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕುಂದಾಪುರ ತಾಲೂಕು ಮುಳ್ಳಿಕಟ್ಟೆ ಕೊರಗಜ್ಜನ ಮೊರೆಹೋಗಿದ್ದಾರೆ. ಅದಲ್ಲದೆ ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಏಳು ಕಿಲೋಮೀಟರ್ ಪಾದಯಾತ್ರೆ ಮಾಡಿ ಕೊರಗಜ್ಜನಿಗೆ ದೂರು ನೀಡಿದ್ದಾರೆ.

ಹಿಂದೂ ಜಾಗರಣ ವೇದಿಕೆಯಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಪೂಜೆಯ ಧಾರ್ಮಿಕ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸಬೇಕಿದ್ದರು. ಆದರೆ ಸರ್ಕಾರ ಮುತಾಲಿಕ್ ಜಿಲ್ಲೆಗೆ ಬರದಂತೆ ನಿಷೇಧಾಜ್ಞೆ ಹೊರಡಿಸಿತ್ತು. ಅಲ್ಲದೆ ಮುತಾಲಿಕ್ ಬಂದರೆ ಶಾಂತಿ ಕದಡುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು.

ಆ ಬಳಿಕ ಮುತಾಲಿಕ್ ಆಗಮನಕ್ಕೆ ತಡೆ ಒಡ್ಡಿದವರ ವಿರುದ್ಧ ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ಹೊರಹಾಕಿದ್ದರು. ಮುತಾಲಿಕ್ ನಿಷೇಧದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಅವರನ್ನು ಕೊರಗಜ್ಜನೇ ಶಿಕ್ಷಿಸಲಿ ಎಂದು ಕಾರ್ಯಕರ್ತರು ಹೇಳಿದ್ದಾರೆ.