Home Breaking Entertainment News Kannada ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಮತ್ತೊಂದು ಸೆಲೆಬ್ರಿಟಿ ಜೋಡಿ !! | ಟೀಂ ಇಂಡಿಯಾದ ಖ್ಯಾತ ಆಟಗಾರ...

ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಮತ್ತೊಂದು ಸೆಲೆಬ್ರಿಟಿ ಜೋಡಿ !! | ಟೀಂ ಇಂಡಿಯಾದ ಖ್ಯಾತ ಆಟಗಾರ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ ಮದುವೆ ಫಿಕ್ಸ್ !!?

Hindu neighbor gifts plot of land

Hindu neighbour gifts land to Muslim journalist

ಸೆಲೆಬ್ರಿಟಿ ಜೋಡಿಯೊಂದು ಸದ್ಯದಲ್ಲೇ ಹಸೆಮಣೆ ಏರಲಿದೆ. ಟೀಂ ಇಂಡಿಯಾದ ಖ್ಯಾತ ಆಟಗಾರ ಕೆ.ಎಲ್.ರಾಹುಲ್‌ ಹಾಗೂ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಪ್ರೀತಿ ವಿಷಯ ಈಗಾಗಲೇ ಬಹಿರಂಗಗೊಂಡಿದ್ದು, ಸದ್ಯದಲ್ಲೇ ಈ ಜೋಡಿ ಮದುವೆ ಆಗಲಿದ್ದಾರೆ.

ಬಾಲಿವುಡ್‌ನಲ್ಲೀಗ ಮದುವೆಯ ಪರ್ವ ಶುರುವಾಗಿದ್ದು, ಫರ್ಹಾನ್ ಅಖ್ತರ್-ಶಿಬಾನಿ ದಾಂಡೇಕರ್, ರಣಬೀರ್ ಕಪೂರ್-ಆಲಿಯಾ ಭಟ್ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ನಡುವಲ್ಲೇ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈಗಾಗಲೇ ಕೆ.ಎಲ್.ರಾಹುಲ್‌ ಹಾಗೂ ಅಥಿಯಾ ಶೆಟ್ಟಿ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಗೂ ಅಧಿಕ ಕಾಲದಿಂದಲೂ ಪ್ರೀತಿಯಲ್ಲಿ ಬಂಧಿಯಾಗಿರುವ ಈ ಜೋಡಿ ವರ್ಷಾಂತ್ಯಕ್ಕೆ ಸತಿ ಪತಿಗಳಾಗೋದು ಗ್ಯಾರಂಟಿ ಅನ್ನುತ್ತಿವೆ ಮಾಧ್ಯಮಗಳ ವರದಿ.

ವರದಿಯ ಪ್ರಕಾರ, ರಾಹುಲ್‌-ಅಥಿಯಾ ಜೋಡಿ ಚಳಿಗಾಲದಲ್ಲಿ ಮದುವೆಗೆ ಸಿದ್ದರಾಗಿದ್ದಾರೆ. ಮಂಗಳೂರಿನ ಮೂಲ್ಕಿಯಲ್ಲಿ ತುಳು ಭಾಷಿಕರ ಕುಟುಂಬದಲ್ಲಿ ಜನಿಸಿದ ಸುನೀಲ್‌ ಶೆಟ್ಟಿ ಭಾರತೀಯ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಮೆರೆದಿದ್ದಾರೆ. ಈಗಾಗಲೇ ಮಗಳ ಮದುವೆಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸುನೀಲ್ ಶೆಟ್ಟಿ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಯೋಜನೆ ಪ್ರಾರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2022 ರ ಅಂತ್ಯದ ವೇಳೆಗೆ ಈ ಜೋಡಿ ದಂಪತಿಗಳಾಗುತ್ತಾರೆ.

ಕೆ.ಎಲ್.ರಾಹುಲ್‌ ಭಾರತ ತಂಡದ ಖ್ಯಾತ ಆಟಗಾರರಾಗಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಉಪ ನಾಯಕರಾಗಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿರುವ ಕೆ.ಎಲ್.‌ ರಾಹುಲ್‌ ಅಥಿಯಾ ಜೊತೆ ಆಗಾಗಾ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇತ್ತೀಚಿಗೆ 30 ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ಗೆ ಪ್ರೇಯಸಿ ಅಥಿಯಾ ಶೆಟ್ಟಿ, ರಾಹುಲ್‌ ಜೊತೆಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ “ಎಲ್ಲಿದ್ದರೂ ನಿನ್ನ ಜೊತೆಗೆ” ಎಂದು ವಿಶ್ ಮಾಡಿದ್ದರು.