ಮಂಗಳೂರು : ಖ್ಯಾತ ಗಾಯಕಿ ನಿಧನ

Share the Article

ತನ್ನ ನಗುಮುಖದಿಂದಲೇ ಮಹಾಮಾರಿ ಖಾಯಿಲೆ ಕ್ಯಾನ್ಸರ್ ನ್ನು ಗೆದ್ದ ಮಹಿಳೆ ಎಂದು ಹೊಗಳಿಕೆಯನ್ನು ಸಂಪಾದಿಸಿದ್ದ ಅದ್ಭುತ ಗಾಯಕಿ ಮಂಗಳೂರಿನ ಕದ್ರಿ ನಿವಾಸಿ ಸುರೇಖಾ ಪೈ (48) ಅಸೌಖ್ಯದಿಂದ ನಿನ್ನೆ ಮುಂಜಾನೆ ನಿಧನರಾದರು.

ಜಾಂಡೀಸ್ ಖಾಯಿಲೆಯಿಂದ ಕೂಡ ಬಳಲುತ್ತಿದ್ದ ಇವರು ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರಾಗಿದ್ದರು. ಮೂಲತಃ ಮುಂಬೈ ನಿವಾಸಿಯಾಗಿರುವ ಸುರೇಖಾ ಅವರು ಬಾಲಿವುಡ್ ಗಾಯಕ ಸೋನು ನಿಗಮ್ ಜೊತೆ ಕೂಡಾ ಹಾಡನ್ನು ಹಾಡಿದ್ದಾರೆ.

ಅವರ ಸ್ವಗೃಹದಲ್ಲೇ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ಸಾವಿಗೆ ಕುಟುಂಸ್ಥರು, ಸ್ನೇಹಿತರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

Leave A Reply