ಉಡುಪಿ: ಪುಟ್ಟ ಮಗುವಿನೊಂದಿಗೆ ತಾಯಿ ನಾಪತ್ತೆ!! ಠಾಣೆಯಲ್ಲಿ ದೂರು ದಾಖಲು-ಪತ್ತೆಗೆ ಮನವಿ

Share the Article

ಉಡುಪಿ: ಸಂಬಂಧಿಕರ ಮನೆಗೆ ಬಟ್ಟೆ ತರಲು ತನ್ನ ಮಗುವಿನೊಂದಿಗೆ ತೆರಳಿದ್ದ ಮಹಿಳೆಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಮಹಿಳೆಯನ್ನು ನಗರದ ಎಂ.ಜಿ.ಎಂ ಕಾಲೇಜು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿರುವ ಹನುಮಂತ ವಡ್ಡರ್ ಎಂಬವರ ಪತ್ನಿ ಪದ್ಮ ಎಂದು ಗುರುತಿಸಲಾಗಿದೆ. ಏಪ್ರಿಲ್ 15ರಂದು ತನ್ನ ಪುಟ್ಟ ಮಗುವಿನೊಂದಿಗೆ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಅತ್ತ ಸಂಬಂಧಿಕರ ಮನೆಗೂ ಹೋಗದೆ, ಇತ್ತ ಮನೆಗೂ ಮರಳದೇ ನಾಪತ್ತೆಯಾಗಿದ್ದಾರೆ ಎಂದು ಪತಿ ಹನುಮಂತ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave A Reply