Home ಕಾಸರಗೋಡು ಮೂರು ವರ್ಷದ ಕಂದಮ್ಮನ ದುರಂತ ಅಂತ್ಯಕ್ಕೆ ಕಾರಣವಾದ ಬಾಟಲಿಯ ಮುಚ್ಚಳ!! ಪೋಷಕರೇ ಮಕ್ಕಳ ಕೈಗೆ...

ಮೂರು ವರ್ಷದ ಕಂದಮ್ಮನ ದುರಂತ ಅಂತ್ಯಕ್ಕೆ ಕಾರಣವಾದ ಬಾಟಲಿಯ ಮುಚ್ಚಳ!! ಪೋಷಕರೇ ಮಕ್ಕಳ ಕೈಗೆ ನೀಡುವ ವಸ್ತುಗಳ ಮೇಲಿರಲಿ ಎಚ್ಚರ!!

Hindu neighbor gifts plot of land

Hindu neighbour gifts land to Muslim journalist

ಜ್ಯೂಸ್ ಒಂದರ ಬಾಟಲಿ ಹಿಡಿದುಕೊಂಡಿದ್ದ ಪುಟ್ಟ ಕಂದಮ್ಮ ಬಾಟಲಿಯ ಮುಚ್ಚಳ ನುಂಗಿ ಗಂಟಲಲ್ಲಿ ಸಿಲುಕಿಕೊಂಡು ಮೃತಪಟ್ಟ ದುರಂತ ಪ್ರಕರಣವೊಂದು ಕೋಯಿಕ್ಕೋಡ್ ಮುಕ್ಕಮ್ ನಲ್ಲಿ ನಡೆದಿದೆ.

ಮೃತ ಮಗುವನ್ನು ಬಿಜು ಮತ್ತು ಆರ್ಯ ದಂಪತಿಯ ಪುತ್ರಿ ದೇವಿಕಾ(03) ಎಂದು ಗುರುತಿಸಲಾಗಿದೆ. ಮಗು ಮುಚ್ಚಳ ಹಿಡಿದುಕೊಂಡು ನುಂಗಿದ ಪರಿಣಾಮ ಗಂಟಲಲ್ಲಿ ಸಿಲುಕಿಕೊಂಡಿದ್ದು, ವಿಷಯ ಗಮನಕ್ಕೆ ಬರುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅತ್ತ ಆಸ್ಪತ್ರೆ ತಲುಪುತ್ತಿದ್ದಂತೆ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಕೋಯಿಕ್ಕೋಡ್ ನಲ್ಲಿರುವ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.ಆಸ್ಪತ್ರೆಯಲ್ಲಿ ಮಗು ಮೃತಪಟ್ಟ ಸುದ್ದಿ ತಿಳಿಯುತ್ತಲೇ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇನ್ನಾದರೂ ಪೋಷಕರು ಮಕ್ಕಳ ಕೈಯ್ಯಲ್ಲಿ ಕೆಲ ವಸ್ತುಗಳನ್ನು ಕೊಡುವಾಗ ಎಚ್ಚರ ವಹಿಸಬೇಕಾಗಿದೆ.