Home Entertainment ‘ನಿಮ್ಮ‌ ತುಟಿಯ ಗಾತ್ರ ಎಷ್ಟು’ ಎಂದವನ ಚಳಿ ಬಿಡಿಸಿದ ನಟಿ!!!

‘ನಿಮ್ಮ‌ ತುಟಿಯ ಗಾತ್ರ ಎಷ್ಟು’ ಎಂದವನ ಚಳಿ ಬಿಡಿಸಿದ ನಟಿ!!!

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿಯಂತೂ ಇತ್ತೀಚೆಗೆ ನಾರ್ಮಲ್ ಆಗಿದೆ. ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದಕ್ಕೆಂದೇ ನಟಿಯರು ಕಾಮೆಂಟ್‌ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್‌ಗಳಿಗೆ ಖಡಕ್ ಉತ್ತರ ನೀಡುತ್ತಾರೆ.

ಸೌತ್ ಬ್ಯೂಟಿ ಶ್ರುತಿ ಹಾಸನ್ ಅಂಥದ್ದೇ ಒಂದು ಕಮೆಂಟ್ ಗೆ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಶ್ರುತಿ ಹಾಸನ್ ಆಗಾಗ ಅಭಿಮಾನಿಗಳ ಜತೆ ಸಂವಹನ ನಡೆಸುತ್ತಿರುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ “ಆಸ್ಕ್ ಮಿ ಎನಿಥಿಂಗ್” ಸೆಷನ್ಸ್ ನಡೆಸಿದ್ದರು. ಯಾವುದೇ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ನೆಟ್ಟಿಗರಿಗೆ ಶ್ರುತಿ ತಿಳಿಸಿದ್ದರು.

ಈ ವೇಳೆ ನೆಟ್ಟಿಗನೊಬ್ಬ ನಿಮ್ಮ ತುಟಿಯ ಗಾತ್ರವೆಷ್ಟು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಶ್ರುತಿ, ತುಟಿಗೂ ಗಾತ್ರ ಇರುತ್ತದೆಯೇ? ಎಂದು ಮರು ಪ್ರಶ್ನಿಸಿದ್ದಾರೆ. ಈ ಮೊದಲೇ ತಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಸತ್ಯವನ್ನು ಬಾಯ್ದಿಟ್ಟಿರುವ ನಟಿ, ಇದು ನನ್ನ ಬದುಕು, ನನ್ನ ಮುಖ. ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ. ಅದನ್ನು ಹೇಳಿಕೊಳ್ಳಲು ನನಗೇನು ಮುಜುಗರವಿಲ್ಲ ಎಂದಿದ್ದಾರೆ.