ಗುತ್ತಿಗೆದಾರ ಸಂತೋಷ್ ಸಾವು ಪ್ರಕರಣಕ್ಕೆ ರೋಚಕ ತಿರುವು : ಲಾಡ್ಜ್ ನಲ್ಲಿ ಕೀಟನಾಶಕ ಬಾಟಲಿ ಪತ್ತೆ!!!

Share the Article

ಇತ್ತೀಚೆಗಷ್ಟೇ ಭಾರೀ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹೌದು ಸಂತೋಷ್ ಮೃತದೇಹ ಪತ್ತೆಯಾಗಿದ್ದ ಲಾಡ್ಜ್‌ನಲ್ಲಿ ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸಂತೋಷ್ ಇದನ್ನು ಸೇವಿಸಿದ್ದರೇ ಎಂಬ ಅನುಮಾನ ಮೂಡಿಸಿದೆ.

ಸಂತೋಷ್ ಚಿಕ್ಕಮಂಗಳೂರಿನಿಂದ ವಿಷ ಖರೀದಿಸಿ ಉಡುಪಿ ಲಾಡ್ಜ್ ಗೆ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಲಾಡ್ಡಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿದ್ದ ಸಂತೋಷ್ ಸೇವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಗಿಡಗಳಿಗೆ ಹುಳ ಬಾಧೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷ ಬಳಸಲಾಗುತ್ತದೆ ಎಂಬುವುದು ಉಲ್ಲೇಖನೀಯ. ಈ ಕೀಟನಾಶಕ ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಸರ್ಕಾರದಿಂದ ನಿಷೇಧಕ್ಕೊಳಪಟ್ಟ ಕೀಟನಾಶಕ ಇದಾಗಿದೆ.

ಲಾಡ್ಜ್ ನಲ್ಲಿ ಕಸದತೊಟ್ಟಿಯಲ್ಲಿ ಈ ವಿಷದ ಬಾಟಲಿ ಪತ್ತೆಯಾಗಿದ್ದು, ಸಂತೋಷ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ. ಸದ್ಯ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.

Leave A Reply