ಮಂಗಳೂರು : ಬಸ್ ಬೆಂಕಿಗಾಹುತಿ ಪ್ರಕರಣ; ಬಸ್ ಚಾಲಕನಿಗೆ 15 ದಿನ ನ್ಯಾಯಾಂಗ ಬಂಧನ

Share the Article

ಹಂಪನಕಟ್ಟೆ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ, ಬೈಕ್ ಸವಾರನ ಮೇಲೆ ಡಿಕ್ಕಿಯಾಗಿ ಬೈಕ್ ಜೊತೆಗೇ ನೂರು ಮೀಟರ್ ದೂರಕ್ಕೆ ಹೊತ್ತೊಯ್ದು ಬೆಂಕಿ ಹತ್ತಿಕೊಂಡಿದ್ದ ಘಟನೆ ಸಂಬಂಧಿಸಿ ಪಾಂಡೇಶ್ವರ ಟ್ರಾಫಿಕ್ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ.

ಎಪ್ರಿಲ್ 8ರಂದು ಮಧ್ಯಾಹ್ನ ಘಟನೆ ನಡೆದಿತ್ತು. ಅನಂತರ ಬೆಂಕಿ ಸಂಪೂರ್ಣ ಹತ್ತಿಕೊಂಡಿದ್ದು ಬಸ್ 75 ಶೇಕಡಾ ಸುಟ್ಟು ಹೋಗಿತ್ತು. ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಬಸ್ ಚಾಲಕ ಬಿಜುವನ್ನು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಎ.26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave A Reply