Home ಕಾಸರಗೋಡು ನಮಾಜ್ ಮಾಡಿ ಮಸೀದಿಯಿಂದ ಮರಳುತ್ತಿದ್ದ ಎಸ್ಡಿಪಿಐ ಮುಖಂಡನ ಹತ್ಯೆ ಮಾಡಿದ ದುಷ್ಕರ್ಮಿಗಳು !!!!

ನಮಾಜ್ ಮಾಡಿ ಮಸೀದಿಯಿಂದ ಮರಳುತ್ತಿದ್ದ ಎಸ್ಡಿಪಿಐ ಮುಖಂಡನ ಹತ್ಯೆ ಮಾಡಿದ ದುಷ್ಕರ್ಮಿಗಳು !!!!

Hindu neighbor gifts plot of land

Hindu neighbour gifts land to Muslim journalist

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರೋರ್ವರನ್ನು ಕೇರಳದ ಪಾಲಕ್ಕಾಡ್ ನಲ್ಲಿ
ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಪಾಲಕ್ಕಾಡ್ ನ ಎಲಪ್ಪುಳ್ಳಿ ನಿವಾಸಿ ಝುಬೈರ್ (47) ಎಂದು ಗುರುತಿಸಲಾಗಿದೆ. ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರಿನಲ್ಲಿ ಬಂದ ತಂಡವೊಂದು ಹತ್ಯೆಗೈದಿದ್ದು ಮಧ್ಯಾಹ್ನ 1:30 ಸುಮಾರಿಗೆ ಕೃತ್ಯ ನಡೆದಿದೆ.

ಶುಕ್ರವಾರದಂದು ಮಸೀದಿಯಲ್ಲಿ ನಮಾಝ್ ಮಾಡಿ ತಮ್ಮ ತಂದೆಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಎಲಪ್ಪುಳ್ಳಿ ಚರ್ಚ್ ಸಮೀಪ ಎರಡು ಕಾರುಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡವು ಡಿಕ್ಕಿ ಹೊಡೆದು ಕೊಲೆಗೈದಿದೆ. ಈ ವೇಳೆ ಜೊತೆಯಲ್ಲಿದ್ದ ತಂದೆ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಝುಬೈರ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಾಲಕ್ಕಾಡ್ ನ ಮಾಜಿ ವಿಭಾಗ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ಎಸ್ಡಿಪಿಐ ಎಲಪ್ಪುಳ್ಳಿ ಪಂಚಾಯತ್ ಸಮಿತಿ ಸದಸ್ಯರೂ ಆಗಿದ್ದಾರೆ. ಕೊಲೆಯ ಹಿಂದೆ ರಾಜಕೀಯ ಆಯಾಮವಿದೆಯೇ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಈ ಕೊಲೆಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದು ಎಸ್ಡಿಪಿಐ ಆರೋಪ ಮಾಡಿದೆ.