ಉಡುಪಿ : ಕೋಳಿ ಹಿಡಿಯಲು ಹೋದ ವ್ಯಕ್ತಿ ನೀರಿಗೆ ಬಿದ್ದು ಸಾವು!

ಉಡುಪಿ: ಕೋಳಿಯೊಂದು ಕೆರೆಯತ್ತ ಹೋದಾಗ, ಅದನ್ನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯು ಕೊರಂಗ್ರಪಾಡಿಯ ಕೆಮ್ಮೂರಿನಲ್ಲಿ ನಿನ್ನೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಶ್ರೀನಿವಾಸ ಪುಜಾರಿ (65) ಎಂದು ಗುರುತಿಸಲಾಗಿದೆ.

ನಗರ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಶವವನ್ನು ವೈದ್ಯಕೀಯ ಪರೀಕ್ಷೆಗೆ ಶವಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೆರವು ಮಾಡಿದ್ದಾರೆ.

Leave A Reply

Your email address will not be published.