ಲವ್ ಜಿಹಾದ್ ಬದಲಿಗೆ ಬರಲಿದೆ ಲವ್ ಕೇಸರಿ!! ವೇದಿಕೆಯಲ್ಲಿ ಹೊಸ ಪದ ಬಳಸಿದ ಶ್ರೀ ರಾಮ ಸೇನೆ ಸಂಚಾಲಕರ ಪ್ರಚೋದನಕಾರಿ ಭಾಷಣ

ರಾಯಚೂರು:ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ಯುವತಿಯರ ಮೇಲೆ ಲವ್ ಜಿಹಾದ್ ನಡೆಯುತ್ತಿದ್ದು, ಒಂದೊಂದು ವಾರ ಸ್ನಾನ ಮಾಡದ ಅವರು ಸೆಂಟ್ ಹಾಕಿಕೊಂಡು ಬಂದು ನಮ್ಮ ಹುಡುಗಿಯರ ಮನವೊಲಿಸಿ, ನಮ್ಮ ಹುಡುಗಿಯರನ್ನು ಮಗು ಹೆರುವ ಯಂತ್ರಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಕಿಡಿಕಾರಿದರು.

 

ನಗರದಲ್ಲಿ ರಾಮನವಮಿ ಆಚರಣೆಯ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇನ್ನು ಮುಂದೆ ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಲವ್ ಜಿಹಾದ್ ಪ್ರಕರಣಗಳು ಕಂಡುಬರಬಾರದು, ನಮ್ಮನೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಬುರ್ಖಾ ಹಾಕಿಸುತ್ತಾರೆ, ಅಂತಹವರನ್ನು ಮಟ್ಟಹಾಕುವುದು ಧರ್ಮ ರಕ್ಷಕರ ಕರ್ತವ್ಯ ಎಂದರು.

ಬಳಿಕ ಮಾತನಾಡಿದ ಅವರು, ನಮ್ಮ ಹೆಣ್ಣು ಮಕ್ಕಳಿಗೆ ಸಮಸ್ಯೆಯಾದಲ್ಲಿ ಹೇಳಿ ಕೊಳ್ಳಲು ಗೊತ್ತಿರುವುದಿಲ್ಲ, ಅಂತವರಿಗೆ ಈ ವೇದಿಕೆ ಮೂಲಕ ಕರೆ ನೀಡುತ್ತಿದ್ದೇನೆ. ನಿಮ್ಮನ್ನು ಲವ್ ಜಿಹಾದ್ ಬಲೆಯಲ್ಲಿ ಬೀಳಿಸಲು ಮುಸ್ಲಿಂ ಯುವಕರು ಪ್ರಯತ್ನ ಪಟ್ಟರೆ ನಮ್ಮ ಗಮನಕ್ಕೆ ತನ್ನಿ, ಅವರ ಮರ್ಮಾಂಗವನ್ನೇ ಕಟ್ ಮಾಡುತ್ತೇವೆ,ಮುಲಾಜಿಲ್ಲದೆ ಕೊಚ್ಚಿ ಹಾಕುತ್ತೇವೆ ಎಂದು ಪ್ರಚೋದನಕಾರಿಯಾಗಿ ನುಡಿದರು.ಸದ್ಯ ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು,ಅನ್ಯಮತೀಯರು ಸಾಮಾಜಿಕ ಜಾಲತಾಣದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

Leave A Reply

Your email address will not be published.