ಹೊಟ್ಟೆಪಾಡಿಗಾಗಿ ‘ ನಾನು ಅವನಲ್ಲ, ಅವಳು’ ಆದ ಯುವಕ! ಈತನ ಮಾತು ಕೇಳಿ ಪೊಲೀಸರೇ ಶಾಕ್ !

Share the Article

ಸೀರೆ, ಕುಪ್ಪಸ ತೊಟ್ಟುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳೀಯರು ಆತನನ್ನು ಹಿಡಿದು ಕಟ್ಟಿಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನಲ್ಲಿ ಸೋಮವಾರ (ಏ.11) ರಾತ್ರಿ ನಡೆದಿದೆ.

ಯುವಕನ ಹಾವ-ಭಾವ ನೋಡಿ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿಯಲು ಹೋದಾಗ ಓಡಿ ಹೋಗಲು ಯತ್ನಿಸಿದ್ದ. ಆದರೂ ಯುವಕನನ್ನು ಹಿಡಿಯುವಲ್ಲಿ ಯಶಸ್ವಿಯಾದ ಸ್ಥಳೀಯರು ಸೀರೆ ಬಿಚ್ಚಿಸಿದಾಗ ಆತ ಮಹಿಳೆಯಲ್ಲ, ಯುವಕ ಎನ್ನುವುದು ಗೊತ್ತಾಗಿದೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆನೇಕಲ್ ಪೊಲೀಸರು ಯುವಕನ ವಿಚಾರಣೆ ನಡೆಸಿದಾಗ, ತನ್ನ ಹೆಸರು ಶ್ರೀಧರ್, ಕೆಲಸ ಇರಲಿಲ್ಲ. ಅದಕ್ಕಾಗಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಆತನ ಹೇಳಿಕೆ ಕೇಳಿ ಒಂದು ಕ್ಷಣ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು.

ಶ್ರೀಧರ್ ಬಾಗಲಕೋಟೆ ನಿವಾಸಿ. ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸ. ಕೆಲದಿನಗಳಿಂದ ಕೆಲಸ ಇಲ್ಲದೆ ಅಲೆದಾಡಿದ್ದ. ಕೆಲಸ ಸಿಗದ ಹಿನ್ನೆಲೆಯಲ್ಲಿ ಹೊಟ್ಟೆಪಾಡಿಗಾಗಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದ. ಇಷ್ಟು ಮಾಹಿತಿಯನ್ನು ಪೊಲೀಸರ ತನಿಖೆ ವೇಳೆ ಶ್ರೀಧರ್ ಹೇಳಿಕೊಂಡಿದ್ದಾನೆ. ಯುವಕನನ್ನು ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

Leave A Reply