ಆಕ್ಸಿಜನ್ ಕೊರತೆಯಿಂದ ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ನವಜಾತ ಶಿಶು!

ಆಕ್ಸಿಜನ್ ಕೊರತೆಯಿಂದಾಗಿ ನವಜಾತಶಿಶು ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ಘಟನೆಯೊಂದು ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದಿದೆ.

 

ಬಸವಪಟ್ಟಣದ ಶೃಂಗಾಯಬಾಬು ತಾಂಡಾದ ಹಾಲೇಶ್ ನಾಯಕ್ ಹಾಗೂ ಸ್ವಾತಿ ದಂಪತಿಯ ಕೂಸೇ ಸಾವನ್ನಪ್ಪಿದ ಮಗು.

ಉಸಿರಾಟದ ಸಮಸ್ಯೆ ಮಗುವಿಗೆ ಎದುರಾಗಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹೊನ್ನಾಳಿ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ನಿರ್ಧಾರ ಮಾಡಿದ್ದರು. ಆದರೆ ಆಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಇರಲಿಲ್ಲ. ಆದರೆ ಆಂಬುಲೆನ್ಸ್ ಚಾಲಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಅರ್ಧದಾರಿಗೆ ಹೋಗುತ್ತಿದ್ದಂತೆ ಮತ್ತೊಂದು ಆ್ಯಂಬುಲೆನ್ಸ್ ಬರುತ್ತದೆ ಎಂದು ಹೇಳಿದ್ದಾನೆ. ಹೊನ್ನಾಳಿ ಆಸ್ಪತ್ರೆಗೆ ತಲುಪುವವರೆಗೂ ಆಕ್ಸಿಜನ್ ಇಲ್ಲದೇ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ.

ಪೋಷಕರು ಆಸ್ಪತ್ರೆ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.