ಮಂಗಳೂರು: ಭೀಕರ ರಸ್ತೆ ಅಪಘಾತ- ಬೈಕ್ ಸವಾರ ಸಾವು

Share the Article

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಬೈಕ್ ಮತ್ತು ಲಾರಿ ಢಿಕ್ಕಿಯಾದ ಪರಿಣಾಮ ಸವಾರ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

ಮೃತ ಸವಾರನನ್ನು ಉಳ್ಳಾಲ ಕುಂಪಲದ ನಿವಾಸಿ ರವಿಕುಮಾರ್(62) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಏಕಮುಖವಾಗಿಯೇ ಸಂಚರಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿರುವ ದ್ವಿಚಕ್ರ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಸವಾರ ಸಾವನ್ನಪ್ಪಿದ್ದಾನೆ. ಡಿಕ್ಕಿ ಹೊಡೆದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತದ ದುರಂತದಿಂದಾಗಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಘಟನೆ ನಡೆದಾಕ್ಷಣ ಎಕ್ಕೂರು ಜಂಕ್ಷನ್‌ನಲ್ಲಿದ್ದ ಸ್ಥಳೀಯರು, ಸಂಘಟನೆಗಳ ನಾಯಕರು ಆಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ನಗರ ಸಂಚಾರಿ ಠಾಣಾ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Leave A Reply