Home Entertainment ರಾಮ್ ಗೋಪಾಲ್ ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕಿದ ಚಿತ್ರಮಂದಿರಗಳು!

ರಾಮ್ ಗೋಪಾಲ್ ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕಿದ ಚಿತ್ರಮಂದಿರಗಳು!

Hindu neighbor gifts plot of land

Hindu neighbour gifts land to Muslim journalist

ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಿರುವುದು ಸಿ ಗ್ರೇಡ್ ಸಿನಿಮಾ. ಪೋರ್ನ್ ನಟಿಯರೊಟ್ಟಿಗೆ ಸಿನಿಮಾ ಮಾಡಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದಾರೆ.

‘ಡೇಂಜರಸ್’ ( ಮಾ ಇಷ್ಟಂ) ಹೆಸರಿನ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಮಾಡಿದ್ದು, ಇದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಗಳಲ್ಲಿ ಪ್ರಚಾರ ಮಾಡಿದ್ದಾರೆ. ಈ ಸಿನಿಮಾ ಇಂದು ಬಿಡುಗಡೆಗೊಳ್ಳಲಿತ್ತು. ಆದರೆ ಹಠಾತ್ ಆಗಿ ಈ ಬಿಡುಗಡೆ ದಿನಾಂಕ ಮುಂದೂಡಿದೆ.

ವರ್ಮಾ ನಿರ್ದೇಶನದ ‘ಡೇಂಜರಸ್’ ಸಿನಿಮಾವನ್ನು ಪ್ರದರ್ಶನ ಮಾಡುವುದಿಲ್ಲ ಎಂದು ಹಲವು ಚಿತ್ರಮಂದಿರ ಮಾಲೀಕರು ಪ್ರತಿರೋಧ ವ್ಯಕ್ತಿಪಡಿಸಿದ್ದು, ಈ ಕಾರಣಕ್ಕಾಗಿ ರಾಮ್ ಗೋಪಾಲ್ ವರ್ಮಾ, ತಮ್ಮ ಸಿನಿಮಾ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಈ ಸಿನಿಮಾದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೀತಿಸುವ ಮತ್ತು ಈ ಪ್ರೀತಿಗೆ ವಿಲನ್‌ಗಳಿಂದ ಸಮಸ್ಯೆ ಎದುರಿಸಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಕತೆ ಇದೆ ಇಬ್ಬರು ನಾಯಕಿಯರ ನಡುವೆ ಶೃಂಗಾರದ ದೃಶ್ಯಗಳು ಇವೆ. ಯುವತಿಯರ ನಡುವಿನ ಪ್ರೇಮವನ್ನು ತೋರಿಸಿದ್ದಕ್ಕಾಗಿ ಕೆಲವು ಸಿನಿಮಾ ಪ್ರದರ್ಶಕರು ಈ ಸಿನಿಮಾದ ವಿರುದ್ಧ ನಿಲವು ತಳೆದಿದ್ದಾರೆ.

“ಈ ಸಿನಿಮಾದಲ್ಲಿ ತೋರಿಸಬಾರದುದ್ದನ್ನು ತೋರಿಸಲು ಹೊರಟಿದ್ದೇನೆ ಎಂಬಂತೆ ಚಿತ್ರಮಂದಿರಗಳು ನಮ್ಮ ಸಿನಿಮಾವನ್ನು ಪ್ರದರ್ಶಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನಾವು ಇದರ ವಿರುದ್ಧ ಹೋರಾಡಲಿದ್ದೇವೆ. ನಮ್ಮ ಸಿನಿಮಾ ಪ್ರದರ್ಶನಗೊಳ್ಳುವಂತೆ ಮಾಡಲು ಅಗತ್ಯ ಕಾನೂನು ಹೋರಾಟಕ್ಕೆ ನಾವು ಮುಂದಾಗಿದ್ದೇವೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ” ಎಂದಿದ್ದಾರೆ. ‘ಡೇಂಜರಸ್’ ಸಿನಿಮಾದಲ್ಲಿ ವರ್ಮಾರ ಮೆಚ್ಚಿನ ನಟಿ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್, ಟೀಸರ್‌ಗಳು ಹಸಿ-ಬಿಸಿ ದೃಶ್ಯಗಳನ್ನು ಒಳಗೊಂಡಿವೆ. ಜೊತೆಗೆ ಆಕ್ಷನ್ ದೃಶ್ಯಗಳು ಸಹ ಇವೆ.