Home Interesting ಕೋಳಿ ಜೊತೆ ಭೀಕರವಾಗಿ ಕಾದಾಡಿ ಸೋತ ಗಿಡುಗ !! |ತನ್ನ ಮರಿಗಳನ್ನು ಜೋಪಾನವಾಗಿರಿಸಲು ತಾಯಿ ಕೋಳಿ...

ಕೋಳಿ ಜೊತೆ ಭೀಕರವಾಗಿ ಕಾದಾಡಿ ಸೋತ ಗಿಡುಗ !! |ತನ್ನ ಮರಿಗಳನ್ನು ಜೋಪಾನವಾಗಿರಿಸಲು ತಾಯಿ ಕೋಳಿ ನಡೆಸಿದ ಫೈಟಿಂಗ್ ನ ರೋಚಕ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಗಿಡುಗ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ. ಇದು ಸುಮಾರು 6 ಕೆ.ಜಿ ತೂಕವನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಬಲ್ಲದು. ಗಿಡುಗ ಮೀನು, ಇಲಿಗಳು, ಮೊಲಗಳು, ಅಳಿಲುಗಳು ಮತ್ತು ಕೋಳಿಗಳನ್ನು ಬೇಟೆಯಾಡುತ್ತವೆ. ಕೆಲವೊಮ್ಮೆ ನರಿ ಮತ್ತು ಜಿಂಕೆ ಮರಿಗಳನ್ನು ಸಹ ಅವುಗಳು ಬೇಟೆಯಾಡುತ್ತವೆ. ಆದರೆ ಇಂತಹ ಭಯಾನಕ ಬೇಟೆಯ ಹಕ್ಕಿ ಕೋಳಿಗೆ ಬಲಿಯಾಗಬಹುದು ಎಂದು ಎಂದಾದರೂ ನೀವು ಊಹಿಸಿದ್ದೀರಾ?

ಹೌದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಬೇಟೆಯ ಅನ್ವೇಷಣೆಯಲ್ಲಿದ್ದ ಗಿಡುಗವೇ ಸ್ವತಃ ಬಲಿಪಶುವಾಗಿದೆ. ಈ ವೀಡಿಯೋದಲ್ಲಿ ಕೋಳಿಮರಿಗಳನ್ನು ಬೇಟೆಯಾಡಲು ಬಂದಿದ್ದ ಗಿಡುಗವೇ ಕೋಳಿಗೆ ಬಲಿಯಾಗಿದೆ. ಹೌದು, ಗಿಡುಗವೊಂದು ಕೋಳಿ ಮರಿಗಳನ್ನು ಬೇಟೆಯಾಡಲು ಕೆಳಗಿಳಿದ ತಕ್ಷಣವೇ ತಾಯಿ ಕೋಳಿ ತನ್ನ ಮರಿಗಳನ್ನು ರಕ್ಷಿಸಲು ಅದರ ಮೇಲೆಯೇ ದಾಳಿ ನಡೆಸಿದೆ. ಹದ್ದನ್ನು ಅಟ್ಟಾಡಿಸಿಕೊಂಡು ಹೋಗಿ ಕೋಳಿ ದಾಳಿ ನಡೆಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

https://www.instagram.com/tv/CbE9-HXgUoP/?igshid=YmMyMTA2M2Y=

ಕೋಳಿಯ ಹಠಾತ್ ದಾಳಿಯಿಂದ ಗಿಡುಗಕ್ಕೆ ಹಾರಲು ಸಾಧ್ಯವಾಗಿಲ್ಲ. ಕೋಳಿಯು ತನ್ನ ಪಾದಗಳಿಂದ ಹದ್ದನ್ನು ಹಿಡಿದು ತನ್ನ ಕೊಕ್ಕಿನಿಂದ ಚುಚ್ಚುತ್ತದೆ. ಪರಿಣಾಮ ಗಿಡುಗ ತನ್ನ ಪ್ರಾಣವನ್ನೇ ಕಳೆದುಕೊಂಡಿದೆ. ನೇಚರ್‌ಗೋಸ್ಮೆಟಲ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ತನ್ನ ಮರಿಗಳ ರಕ್ಷಣೆಗೆ ತಾಯಿ ಕೋಳಿ ಏನುಬೇಕಾದರೂ ಮಾಡುತ್ತದೆ ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ.