ಕಾರ್ಕಳ : ಜೆಸಿಬಿ- ಬೈಕ್ ಭೀಕರ ಅಪಘಾತ: ಬೈಕ್ ಸವಾರ ಸಾವು!

Share the Article

ಕಾರ್ಕಳ : ಮೂಡುಬಿದಿರೆ ಕಾರ್ಕಳ ಹೆದ್ದಾರಿಯ ಸಾಣೂರು ಮುರತ್ತಂಗಡಿ ಎಂಬಲ್ಲಿ ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ಅಪಘಾತವೊಂದು ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಬೈಕ್ ಸವಾರ ಇರ್ವತ್ತೂರಿನ ಅವಿನಾಶ್ (27) ಎಂಬಾತ ಮೃತಪಟ್ಟಿದ್ದಾರೆ. ಈ ಘಟನೆ ನಿನ್ನೆ ರಾತ್ರಿ ನಡೆದಿದೆ.

ಯುವಕ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಜೆಸಿಬಿ ಚಾಲಕ ನಾಪತ್ತೆಯಾಗಿದ್ದಾನೆ. ಬೇರೆ ವಾಹನ ಚಾಲಕರು ಹಾಗೂ ಸ್ಥಳೀಯರ ನೆರವು ಪಡೆದು ಜೆಸಿಬಿ ಅಡಿ ಸಿಲುಕಿಕೊಂಡಿದ್ದ ಮೃತ ದೇಹವನ್ನು ಹೊರತೆಗೆದಿದ್ದಾರೆ.

ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply