Home Interesting ಇ-ಶ್ರಮ್ ಕಾರ್ಡ್ ಯೋಜನೆಯಿಂದ ಕಾರ್ಮಿಕರಿಗೆ ಗುಡ್ ನ್ಯೂಸ್|ಈ ಕಾರ್ಡ್ ನಿಂದ ಸಿಗುವ ಹಲವು ಸೌಲಭ್ಯಗಳ ಕುರಿತು...

ಇ-ಶ್ರಮ್ ಕಾರ್ಡ್ ಯೋಜನೆಯಿಂದ ಕಾರ್ಮಿಕರಿಗೆ ಗುಡ್ ನ್ಯೂಸ್|ಈ ಕಾರ್ಡ್ ನಿಂದ ಸಿಗುವ ಹಲವು ಸೌಲಭ್ಯಗಳ ಕುರಿತು ಇಲ್ಲಿದೆ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ನವದೆಹಲಿ:ಇ-ಶ್ರಮ್ ಕಾರ್ಡ್ ಯೋಜನೆ ಅಸಂಘಟಿತ ವರ್ಗದ ಜನರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದ್ದು,ಇದೀಗ ಸರ್ಕಾರ ಜನರ ಖಾತೆಗಳಿಗೆ ಮುಂದಿನ ಕಂತು 500 ರೂ.ಗಳನ್ನು ಮತ್ತೊಮ್ಮೆ ಕಳುಹಿಸಲಿದೆ.

ಈ ಕಾರ್ಡ್ ಯೋಜನೆಯಿಂದ ಕಂತಿನ ಹೊರತಾಗಿಯೂ ಫಲಾನುಭವಿಗಳು ಹಲವು ಸವಲತ್ತುಗಳನ್ನು ಪಡೆಯಬಹುದಾಗಿದೆ.ಈ ಯೋಜನೆಯ ಪ್ರಕಾರ,ಕೆಲ ಯೋಜನೆಗಳಲ್ಲಿ ಉದ್ಯೋಗ, ವಿಮೆಯಂತಹ ಸೌಲಭ್ಯಗಳನ್ನು ನೀಡಿದರೆ ಮತ್ತೊಂದೆಡೆ ಕೆಲವು ಯೋಜನೆಗಳಲ್ಲಿ ಜನರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ವರ್ಗಾಯಿಸಲಾಗುತ್ತಿದೆ.

ಇ-ಶ್ರಮ್ ಕಾರ್ಡ್ ಹೊಂದಿದ್ದರೆ, ನೀವು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ 2 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯಬಹುದು, ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 2 ಲಕ್ಷ ರೂ., ವ್ಯಕ್ತಿಯು ಅಂಗವೈಕಲ್ಯ ಹೊಂದಿದ್ದರೆ, 1 ಲಕ್ಷ ರೂ. ನೀಡಲಾಗುವುದು. ಅಲ್ಲದೆ ಈ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಹಾಯಕ್ಕಾಗಿ ಹಣವನ್ನು ಸಹ ನೀಡಲಾಗುತ್ತದೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ನೇರ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದ್ದು,ಉಚಿತ ಸೈಕಲ್, ಉಚಿತ ಹೊಲಿಗೆ ಯಂತ್ರ, ಮಕ್ಕಳಿಗೆ ಸ್ಕಾಲರ್‌ಶಿಪ್, ನಿಮ್ಮ ಕೆಲಸಕ್ಕೆ ಬೇಕಾದ ಉಚಿತ ಪರಿಕರಗಳು ಮುಂತಾದ ಕಾರ್ಮಿಕ ಇಲಾಖೆಯ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಹ ಪಡೆಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಪಡಿತರ ಚೀಟಿಯನ್ನು ಇ-ಶ್ರಮ್ ಕಾರ್ಡ್ ಗೆ ಲಿಂಕ್ ಮಾಡಲಾಗುತ್ತದೆ, ಇದರಿಂದ ನೀವು ದೇಶದ ಯಾವುದೇ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೇ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತದೆ.