Home News ತಮ್ಮನ ಪ್ರೀತಿಗಾಗಿ ತಾನೇ ಪ್ರಾಣ ಕೊಟ್ಟ ಅಣ್ಣ!! ಮಾತುಕತೆಗೆ ತೆರಳಿದ್ದ ವೇಳೆ ಯುವತಿಯ ಮನೆಯವರಿಂದ ಚೂರಿ...

ತಮ್ಮನ ಪ್ರೀತಿಗಾಗಿ ತಾನೇ ಪ್ರಾಣ ಕೊಟ್ಟ ಅಣ್ಣ!! ಮಾತುಕತೆಗೆ ತೆರಳಿದ್ದ ವೇಳೆ ಯುವತಿಯ ಮನೆಯವರಿಂದ ಚೂರಿ ಇರಿತ-ಗಾಯಾಳು ಸಾವು

Hindu neighbor gifts plot of land

Hindu neighbour gifts land to Muslim journalist

ಸಹೋದರನ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ತೆರಳಿದ ಅಣ್ಣನನ್ನು ಯುವತಿ ಕುಟುಂಬಸ್ಥರು ಚಾಕುವಿನಿಂದ ಇರಿದು ಕೊಲೆ ನಡೆಸಿದ ಘಟನೆಯೊಂದು ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚಿಕ್ಕರಾಜು(30) ಎಂದು ಗುರುತಿಸಲಾಗಿದೆ.

ಚಿಕ್ಕರಾಜುವಿನ ತಮ್ಮ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವಿಚಾರ ಯುವತಿಯ ಮನೆಯಲ್ಲಿ ಗೊತ್ತಾದ ಹಿನ್ನೆಲೆಯಲ್ಲಿ ಜಗಳ ಪ್ರಾರಂಭವಾಗಿತ್ತು. ಈ ಬಗ್ಗೆ ವಿಚಾರಿಸಲೆಂದು ಯುವತಿಯ ಮನೆಗೆ ಚಿಕ್ಕರಾಜು ತೆರಳಿದ್ದು, ಈ ಸಂದರ್ಭ ಯುವತಿಯ ಮನೆಯಲ್ಲಿ ಚಿಕ್ಕರಾಜು ಮೇಲೆ ಚೂರಿ ಇರಿಯಲಾಗಿದೆ.

ಘಟನೆಯಿಂದ ಗಂಭೀರ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕರಾಜು ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.