Home latest ರಾಮನ ದೇವಾಲಯದಲ್ಲಿ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ!! ಬೀಗ ಹಾಕಲಾಗಿದ್ದ ದೇವಾಲಯಕ್ಕೆ ಪ್ರವೇಶ ಕಲ್ಪಿಸಿದ್ದು ಯಾರು!??

ರಾಮನ ದೇವಾಲಯದಲ್ಲಿ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ!! ಬೀಗ ಹಾಕಲಾಗಿದ್ದ ದೇವಾಲಯಕ್ಕೆ ಪ್ರವೇಶ ಕಲ್ಪಿಸಿದ್ದು ಯಾರು!??

Hindu neighbor gifts plot of land

Hindu neighbour gifts land to Muslim journalist

ಆಂಧ್ರಪ್ರದೇಶ: ಇಲ್ಲಿನ ಬಿಜೆಪಿ ಉಸ್ತುವಾರಿಯಾದ ಸುನಿಲ್ ದೇವಧರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದು, ಸದ್ಯ ಭಾರೀ ಸುದ್ದಿಯಾಗುವುದರೊಂದಿಗೆ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.ವೈರಲ್ ಆದ ವಿಡಿಯೋ ದಲ್ಲಿ ಬೀಗ ಹಾಕಲಾಗಿದ್ದ ರಾಮ ಮಂದಿರವೊಂದರಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಅನೇಕ ಮಂದಿ ತಮ್ಮ ಧರ್ಮಗುರುಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿರುವುದು ಕಂಡುಬಂದಿದೆ.

ವಿಶಾಖಪಟ್ಟಣಂ ನ ಗಂಗವರಂನಲ್ಲಿರುವ ರಾಮ ಮಂದಿರ ಇದಾಗಿದ್ದು, ಬೀಗ ಹಾಕಲಾಗಿತ್ತು. ಆದರೆ ಏಕಾಏಕಿ ಪ್ರವೇಶಿಸಿದ್ದ ಕ್ರೈಸ್ತರು ದೇವಾಲಯದಲ್ಲಿ ಅಕ್ರಮವಾಗಿ ಪ್ರಾರ್ಥನೆ ನಡೆಸಲು ಮುಂದಾಗಿದ್ದರು. ಈ ಸಂದರ್ಭ ಕೆಲ ಹಿಂದೂ ಕಾರ್ಯಕರ್ತರು ಆ ದೃಶ್ಯಗಳನ್ನು ಸೆರೆಹಿಡಿದು ಬಿಜೆಪಿ ಸರ್ಕಾರದ ಗಮನಕ್ಕೆ ತಂದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹಿಂದೂ ಧರ್ಮದ ಮೇಲಾದ ಅವಮಾನ ಇದಾಗಿದೆ ಎನ್ನಲಾಗಿದ್ದು, ಕೃತ್ಯದಲ್ಲಿ ಪಾಲ್ಗೊಂಡವರ ಮೇಲೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕೆನ್ನುವ ಆಗ್ರಹವಾಗಿದೆ.