ಪರೀಕ್ಷೆಯಲ್ಲಿ ನಕಲು ಮಾಡಿದನೆಂದು ಕೈ ಕಚ್ಚಿದ ಉಪನ್ಯಾಸಕ ! ವಿದ್ಯಾರ್ಥಿಯಿಂದ ಆರೋಪ!

Share the Article

ಪರೀಕ್ಷೆಯಲ್ಲಿ ನಕಲು ಮಾಡಿದ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಕೈಯನ್ನು ಉಪನ್ಯಾಸಕನೊಬ್ಬರು ಕಚ್ಚಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭವಿಸಿದೆ.

ಕೀರ್ತೇಶ್ ಎಂಬ
ಅಂತಿಮ ಬಿಎ ಪದವಿ ಓದುತ್ತಿರುವ ವಿದ್ಯಾರ್ಥಿ ಇಂದು ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ. ಈ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕರಾದ ಅಂಜನ್ ಕುಮಾರ್ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಅಂಜನ್ ಕುಮಾರ್ ಪ್ರಯತ್ನಿಸಿದ್ದಾರೆ.

ಈ ಸಂದರ್ಭ ವಿದ್ಯಾರ್ಥಿ ಕೀರ್ತೇಶ್ ಪರೀಕ್ಷಾ ಮೇಲ್ವಿಚಾರಕ ಅಂಜನ್ ಕುಮಾರ್ ರವರಿಗೆ ಉಡಾಫೆ ಉತ್ತರಗಳನ್ನು ನೀಡಿದ್ದಾನೆ.

ಇದರಿಂದ ಕೋಪಗೊಂಡ ಪರೀಕ್ಷಾ ಮೆಲ್ವೀಚಾರಕರ ಅಂಜನ್ ಕುಮಾರ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ಕೈಯನ್ನು ಕಚ್ಚಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿ ಹೊಸನಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಪೋಲಿಸರಿಗೆ ದೂರು ನೀಡಿದ್ದಾನೆ ಎಂದು ಮಾಹಿತಿ ತಿಳಿಯಲಾಗಿದೆ.

Leave A Reply