Home Entertainment RRR ಸಿನಿಮಾ ಬಿಡುಗಡೆ ಬೆನ್ನಲ್ಲೇ ‘ರಾಜಮೌಳಿ’ಯನ್ನು ಅನ್ ಫಾಲೋ ಮಾಡಿದ ಆಲಿಯಾ | ನಟಿಯ ನಡೆಗೆ...

RRR ಸಿನಿಮಾ ಬಿಡುಗಡೆ ಬೆನ್ನಲ್ಲೇ ‘ರಾಜಮೌಳಿ’ಯನ್ನು ಅನ್ ಫಾಲೋ ಮಾಡಿದ ಆಲಿಯಾ | ನಟಿಯ ನಡೆಗೆ ಚಿತ್ರರಂಗ ನಿಬ್ಬೆರಗು

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ಬಹುನಿರೀಕ್ಷಿತ ಚಿತ್ರವಾದ ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾ ಗೆಲುವನ್ನು ಕಂಡಿದೆ. ಚಿತ್ರ ಎಲ್ಲಾ ಕಡೆ ಭರ್ಜರಿ ಪ್ರದರ್ಶನವನ್ನು ಕಂಡಿದೆ. ಆದರೆ ಈ ಸಿನಿಮಾದ ನಟಿ ಆಲಿಯಾ ಭಟ್ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ, ರಾಜಮೌಳಿಯವರನ್ನು ಇನ್ಸ್ಟಾಗ್ರಾಂ ನಲ್ಲಿ ಅನ್ ಫಾಲೋ ಮಾಡಿದ್ದಾರೆ.

ಸಿನಿಮಾದಲ್ಲಿ ಆಲಿಯಾ ಪಾತ್ರಕ್ಕೆ ಅಷ್ಟೇನೂ ಮಹತ್ವವಿಲ್ಲ. ಅಲ್ಲದೇ ಕೆಲವೇ ಕ್ಷಣಗಳ ಕಾಲ ಮಾತ್ರ ಆಲಿಯಾ ತೆರೆಯ ಮೇಲೆ ಕಾಣಿಸುತ್ತಾರೆ. ಈ ಕಾರಣದಿಂದಾಗಿ ಆಲಿಯಾಗೆ ನಿರ್ದೇಶಕರ ಮೇಲೆ ಅಸಮಧಾನವಿದೆ ಎನ್ನಲಾಗಿದೆ.

ಹೀಗಾಗಿ ಆರ್ ಆರ್ ಆರ್ ಬಿಡುಗಡೆಯಾದ ಬೆನ್ನಲ್ಲೇ ಆಲಿಯಾ ರಾಜಮೌಳಿಯವರನ್ನು ಇನ್ಸ್ಟಾಗ್ರಾಂ ನಲ್ಲಿ ಅನ್ ಫಾಲೋ ಮಾಡಿ, ಆರ್ ಆರ್ ಆರ್ ಸಿನಿಮಾಗೆ ಸಂಬಂಧಿಸಿದ ಪೋಸ್ಟ್ ಗಳನ್ನು ಕೂಡಾ ಡಿಲೀಟ್ ಮಾಡಿದ್ದಾರೆ.