ಅತ್ತೆ-ಸೊಸೆ ಕಟಿಪಿಟಿಗೆ ಮತ್ತೊಮ್ಮೆ ವಿಧವೆಯಾದಳು ಮೇಘನಾ | ಶಂಕರಣ್ಣ ಸಾವಿಗೆ ಹೊರಬಿತ್ತು ಕಾರಣ !

Share the Article

25 ವರ್ಷದ ಮೇಘನಾಳನ್ನು ಕೈಹಿಡಿದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ 45 ವರ್ಷದ ರೈತ ಶಂಕರಣ್ಣ ಮದುವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ. ಕಳೆದ ತಿಂಗಳು ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿ ಅದ್ದೂರಿಯಾಗಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದಾರೆ. ಇದರ ಜೊತೆ ಜೊತೆಗೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ನಾವು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋ ಹಾಗೆ ಕಾಣಿಸಿಕೊಂಡಿದ್ದರು. ಆದರೀಗ ತನ್ನ ಒಲವಿನ ಹೆಂಡತಿಯನ್ನು ಒಬ್ಬಂಟಿ ಮಾಡಿ ಶಂಕರಣ್ಣ ಬದುಕಿನ ಪಯಣ ಮುಗಿಸಿಬಿಟ್ಟಿದ್ದಾರೆ.

ಶಂಕರಣ್ಣ(45) ಮಂಗಳವಾರ ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದರು. ಹೊಲಕ್ಕೆ ಹೋದ ಶಂಕರಣ್ಣ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ರಾತ್ರಿ ಶಂಕರಣ್ಣ ಅವರ ತಾಯಿ ಮತ್ತು ಪತ್ನಿ ನಡುವೆ ಗಲಾಟೆ ನಡೆದಿತ್ತು. ಅತ್ತೆ-ಸೊಸೆಯ ಗಲಾಟೆಗೆ ಬೇಸತ್ತ ಶಂಕರಣ್ಣ, ನೀವಿಬ್ಬರೂ ಪ್ರತಿನಿತ್ಯ ರೀತಿ ಗಲಾಟೆ ಮಾಡಿದ್ರೆ ನಾನು ಸಾಯುತ್ತೇನೆ ಎಂದು ಹೇಳಿ, ಗಲಾಟೆ ನಿಲ್ಲಿಸಿದರೆ ನನಗೂ ನೆಮ್ಮದಿ ಎಂದಿದ್ದರಂತೆ. ಆದರೆ ಗಲಾಟೆ ನಿಲ್ಲುವ ಲಕ್ಷಣ ಕಂಡಿರಲಿಲ್ಲ.

ಇಷ್ಟೆಲ್ಲಾ ಆಗಿರುವುದು ಜಮೀನಿಗಾಗಿ. ಶಂಕರಣ್ಣನ ಹೆಸರಲ್ಲಿ 2.5 ಎಕರೆ ಜಮೀನಿದೆ. ಇದನ್ನು ಮಾರಿ ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ನೆಲೆಸೋಣ ಎಂದು ಮದುವೆ ಆದಾಗಿನಿಂದ ಮೇಘನಾ ಒತ್ತಾಯ. ಯಾವುದೇ ಕಾರಣಕ್ಕೂ ಆಸ್ತಿ ಮಾರಾಟ ಮಾಡೋಕೆ ನಾನು ಬಿಡಲ್ಲ ಅಂತ ಶಂಕರಣ್ಣನ ತಾಯಿ ಹಠ. ಇದೇ ವಿಚಾರಕ್ಕೆ ಪದೇಪದೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಎಲ್ಲೂ ಹೋಗೋದು ಬೇಡ, ಇಲ್ಲೇ ತಾಯಿ ಜತೆ ಹಳ್ಳಿಯಲ್ಲೇ ಇರೋಣ ಎಂದು ಶಂಕರಣ್ಣ ಹೇಳಿದರೂ ಮೇಘನಾ ಒಪ್ಪಿರಲಿಲ್ಲವಂತೆ. ಇದೇ ಕಾರಣಕ್ಕೆ ನಿನ್ನೆ ಸಂಜೆಯೂ ಅತ್ತೆ-ಸೊಸೆ ಜಗಳವಾಡಿದ್ದರಂತೆ. ಬೇಸತ್ತ ಶಂಕರಣ್ಣ, ಹೊಲದಲ್ಲಿ ಹಲಸಿನ ಮರಕ್ಕೆ ನೇಣುಬಿಗಿದುಕೊಂಡು ಬದುಕಿನ ಪಯಣ ಮುಗಿಸಿದ್ದಾರೆ.

ಈಗ ಅತ್ತೆ ಸೊಸೆ ಗೋಳೋ ಅಂತ ಅಳುತ್ತಿದ್ದಾರೆ.

Leave A Reply