ವಿಧವಾ ವೇತನ ಯೋಜನೆ : ₹ 800 ಮಾಸಿಕ ವೇತನ | ಅರ್ಜಿ ಸಲ್ಲಿಕೆ ಹೇಗೆ ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕರ್ನಾಟಕ ಸರಕಾರ ‘ವಿಧವಾ ವೇತನ ಯೋಜನೆ’ ಯನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಈ ಯೋಜನೆಯಡಿ ವಿಧವೆಯರಿಗೆ ವೇತನ ನೀಡಲಾಗುತ್ತಿದೆ. 1984 ರ ಎಪ್ರಿಲ್ 1 ರಿಂದ ಈ ವಿಧವಾ ವೇತನ ಯೋಜನೆಯನ್ನು ಕಾರ್ಯಗತ ಮಾಡಲಾಗಿದೆ.

 

18 ವರ್ಷ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ಮಾಸಿಕ ರೂ.800/- ವಿಧವಾ ವೇತನ ನೀಡಲಾಗುತ್ತಿದೆ.

ಅರ್ಹತೆ : ನಿರ್ಗತಿಕ ವಿಧವೆ ಎಂದರೆ ಪತಿ ಇಲ್ಲದ ಒಬ್ಬ ಸ್ತ್ರೀ. ಇದಕ್ಕೆ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಾದರೆ ರೂ.12,000/- ಹಾಗೂ ನಗರ ಪ್ರದೇಶಗಳಲ್ಲಿ ರೂ.17,000 ಕ್ಕಿಂತ ಕಡಿಮೆ ಇರಬೇಕು.
ಅರ್ಜಿದಾರರ ಮರಣ ಹೊಂದಿದ ಪತಿಯು ಅರ್ಜಿ ದಿನಾಂಕದಿಂದ ಹಿಂದಿನ ಮೂರು ವರ್ಷಗಳಲ್ಲಿ ಅದೇ ರಾಜ್ಯದ ನಿವಾಸಿಯಾಗಿರಬೇಕು.

ವಿಧವಾ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅರ್ಜಿಯನ್ನು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಸಲ್ಲಿಸಬೇಕು.

ಪಿಂಚಣಿ ಪಡೆಯುವವರು ಇದಕ್ಕೆ ಅರ್ಹರಲ್ಲ.

ಮೃತರಾಗುವವರೆಗೆ, ಪುನರ್ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೆ ಈ ವಿಧವಾ ವೇತನ ಪಡೆಯಲು ಅರ್ಹರು.

ಜನನ ಪ್ರಮಾಣ ಪತ್ರ, ವೋಟರ್ ಐಡಿ ಅಥವಾ ವೈದ್ಯಕೀಯ ದೃಢೀಕರಣ ಪತ್ರದಲ್ಲಿರುವ ಜನ್ಮದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಗಳಾಗಿರುತ್ತದೆ.

ಈ ಯೋಜನೆ ಪಡೆಯಲು ಬೇಕಾಗುವ ದಾಖಲೆಗಳು : ಜನನ ಪ್ರಮಾಣಪತ್ರ, ವೈದ್ಯಕೀಯ ದೃಢೀಕರಣ ಪತ್ರ, ಪತಿಯ ಮರಣ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಯಸ್ಸಿನ ದೃಢೀಕರಣ ಪತ್ರ, ಅಥವಾ ಭಾರತ ಚುನಾವಣಾ ಆಯೋಗ ನೀಡುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧವೆಯರ ಮಾಸಿಕ ವೇತನವನ್ನು 600 ರೂಪಾಯಿಯಿಂದ 800 ರೂಪಾಯಿಗೆ ಹೆಚ್ಚಿಸಿದ್ದಾರೆ.

Leave A Reply

Your email address will not be published.