Home Health ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ ?

ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ ?

Hindu neighbor gifts plot of land

Hindu neighbour gifts land to Muslim journalist

ಕೆಲಕಡೆ ಮದುವೆಗಿಂತ ಮೊದಲು ಹುಡುಗ-ಹುಡುಗಿ ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಲಾಗುತ್ತದೆ. ಇನ್ನು ಕೆಲವರು ಹೊಂದಾಣಿಕೆಗಾಗಿ ಡೇಟಿಂಗ್ ಹೋಗುತ್ತಾರೆ. ಮುಂಚೆ ವರ ಪರೀಕ್ಷೆ ವಧು ಪರೀಕ್ಷೆಗಳಿದ್ದವು. ಕೆಲವೆಡೆ ಮದುವೆ ಮೊದಲು ವರ್ಜಿನಾಲಿಟಿ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಆದರೆ ಈಗ  ಮದುವೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎನ್ನುತ್ತಿದೆ ವೈದ್ಯಲೋಕ.ಯಾವ ಪರೀಕ್ಷೆ ಗೊತ್ತೆ ?

ಮದುವೆಗೂ ಮುನ್ನ ವರ-ವಧು ಪರಸ್ಪರರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಹಾಗಾಗಿ ಕೆಲವೊಂದು ವೈದ್ಯಕೀಯ ಪರೀಕ್ಷೆಯನ್ನು ಅವಶ್ಯವಾಗಿ ಮಾಡಿಕೊಳ್ಳಬೇಕು. ಮನುಸ್ಸು ಹೊಂದಾಣಿಗೆ ಎಷ್ಟು ಮುಖ್ಯವೊ ಹಾಗೆ  ಮದುವೆಗೂ ಮುನ್ನ ರಕ್ತದ ಗುಂಪು ತಿಳಿದಿರಬೇಕು. ರಕ್ತದ ಗುಂಪಿನಲ್ಲಿ ಹೊಂದಾಣಿಕೆ ಆಗದಿದ್ದರೆ, ಹುಟ್ಟುವ ಮಗುವಿಗೆ ಅನಿಮಿಯಾ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಮೊದಲೇ ಬ್ಲಡ್ ಗ್ರೂಪ್ ತಿಳಿದಿದ್ದರೆ ಗರ್ಭಿಣಿಯಾದಾಗ ವೈದ್ಯರ ಸಲಹೆ ಪಡೆಯಬಹುದು.

ಹೆಚ್ ಐ ವಿ ಪರೀಕ್ಷೆ ಕೂಡ ಮಾಡಿಸಿಕೊಳ್ಳಬೇಕು. ಹೆಚ್ ಐ ವಿ ಪೀಡಿತ ವ್ಯಕ್ತಿಯನ್ನು ಮದುವೆಯಾಗದಿರುವುದು ಒಳ್ಳೆಯದು.
ವಧು-ವರರು ವಿ ಡಿ ಆರ್ ಎಲ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲೈಂಗಿಕ ಸಮಸ್ಯೆ, ರೋಗಗಳಿದ್ದರೆ ಇದ್ರಿಂದ ತಿಳಿಯುತ್ತದೆ. ರೋಗ ಪೀಡಿತ ವ್ಯಕ್ತಿ ಜೊತೆ ಸಂಬಂಧ ಬೆಳೆಸಿದ್ರೆ ಸಂಗಾತಿಗೂ ಇದು ಹರಡುತ್ತದೆ. ಹುಟ್ಟುವ ಮಗುವಿನ ಮೇಲೂ ಇದು ಪರಿಣಾಮ ಬೀರುತ್ತದೆ.