ಉಡುಪಿ : ಮೃತದೇಹದೊಂದಿಗೆ ಮೂರು ದಿನ ಕಳೆದ ಮನೆ ಮಂದಿ!

Share the Article

ಉಡುಪಿ : ಮನೆ ಮಂದಿ ಮೂರು ದಿನ ಕೊಳೆತ ಮೃತದೇಹದೊಂದಿಗೆ ಕಳೆದಿರುವ ಘಟನೆ ಶುಕ್ರವಾರ ಸಂಜೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಮೃತರನ್ನು ಕಾಡಬೆಟ್ಟುವಿನ ಹರಿಶ್ಚಂದ್ರ ಪೂಜಾರಿ (70) ಎಂದು ಗುರುತಿಸಲಾಗಿದೆ.

ಅವಿವಾಹಿತರಾಗಿರಿವ ಈ ವ್ಯಕ್ತಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ತನ್ನ ವಯೋವೃದ್ಧ ತಾಯಿ ಹಾಗೂ ಮಾನಸಿಕ ಅಸ್ವಸ್ಥೆ ತಂಗಿ ಜೊತೆ ವಾಸ ಮಾಡಿಕೊಂಡಿದ್ದರು.

ಮದ್ಯ ವ್ಯಸನಿಯಾಗಿದ್ದ ಹರಿಶ್ಚಂದ್ರ, ಸುಮಾರು ಎರಡು ಮೂರು ದಿನಗಳ ಹಿಂದೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಇಟ್ಟುಕೊಂಡು ತಾಯಿ ಮತ್ತು ತಂಗಿ ಮೂರು ದಿನ ಕಳೆದಿದ್ದರು. ಮೃತದೇಹ ಕೊಳೆತು ದುರ್ವಾಸನೆ ಹಬ್ಬಿ ವಾಸನೆ ಬರಲಾರಂಭಿಸಿದ ಕಾರಣ ಸ್ಥಳೀಯರಿಗೆ ವಿಷಯ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ನಿರೀಕ್ಷಕ ಪ್ರಮೋದ್, ಠಾಣಾಧಿಕಾರಿ ಮಹೇಶ್, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಕಾನೂನು ಪ್ರಕ್ರಿಯೆ ನಡೆಸಿದರು.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply