Home ದಕ್ಷಿಣ ಕನ್ನಡ ವಿಟ್ಲ : ಬಾವಿಯೊಳಗೆ ಬಿದ್ದ ಕೋಳಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ !

ವಿಟ್ಲ : ಬಾವಿಯೊಳಗೆ ಬಿದ್ದ ಕೋಳಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ !

Hindu neighbor gifts plot of land

Hindu neighbour gifts land to Muslim journalist

ವಿಟ್ಲ : 70 ಅಡಿ ಆಳದ ಬಾವಿಗೆ ಬಿದ್ದ ಕೋಳಿ ಮರಿಯನ್ನು ರಕ್ಷಿಸಲು ಹೋಗಿ ಬಿದ್ದು, ವ್ಯಕ್ತಿಯೋರ್ವ ಮೃತಪಟ್ಟ ಘಟನೆಯೊಂದು ಶನಿವಾರ ಸಂಜೆ 4 ರ ಸುಮಾರಿಗೆ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ.

ದಿ.ಮುದ್ದ ಮುಗೇರರ ಪುತ್ರ ವಸಂತ ಮುಗೇರ ( 37) ಎಂಬುವವರೇ ಮೃತಪಟ್ಟ ವ್ಯಕ್ತಿ.

ಉಪ್ಪಳದ ವಿದ್ಯುತ್ ಗುತ್ತಿಗೆದಾರರ ಕಾರ್ಮಿಕನಾಗಿದ್ದ ವಸಂತ ಅವರು ಕೇರಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರದಿಂದಾಗಿ ರಜೆಯಲ್ಲಿದ್ದ.

ಬಾವಿಗೆ ಬಿದ್ದ ಕೋಳಿಮರಿಯನ್ನು ರಕ್ಷಿಸುವ ಸಲುವಾಗಿ
ಹಗ್ಗ ಕಟ್ಟಿದ ಬುಟ್ಟಿಯನ್ನು ಬಾವಿಗೆ ಇಳಿಸುತ್ತಿದ್ದ ಸಂದರ್ಭ ಬಾವಿಯ ಕಟ್ಟೆ ಕುಸಿದು ಬಾವಿಗೆ ಬಿದ್ದಿದ್ದು ಮೇಲೆಕೆತ್ತುವಾಗಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ವಿಟ್ಲ ಎಸೈ ಸಂದೀಪ್ ಕುಮಾರ್, ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಅಶೋಕ್ ಆಗಮಿಸಿದ್ದು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.