ಈ ಚಿತ್ರದಲ್ಲಿರುವವರು ಯಾರೆಂದು ಬಲ್ಲಿರಾ?? | ಸ್ಯಾಂಡಲ್ ವುಡ್ ನಟನ ಈ ಹೊಸ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

Share the Article

ನಟರು ಪ್ರೇಕ್ಷಕರಿಗಾಗಿ ವಿವಿಧ ರೀತಿಯ ಪಾತ್ರಗಳನ್ನು ಅಭಿನಯ ಮಾಡಲು ಹಾತೊರೆಯುತ್ತಾರೆ. ಅಂತೆಯೇ ಇದೀಗ ಕನ್ನಡದ ಹೆಸರಾಂತ ನಟ ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆತ ಬೇರಾರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ !!

ನಟ ಉಪೇಂದ್ರ ತೆರೆ ಮೇಲೆ ವಿಚಿತ್ರ ಗೆಟಪ್ ನಲ್ಲಿ ಕಾಣಿಸಿಕೊಳ್ಳುವುದು ಇದು ಇದೇನು ಮೊದಲಲ್ಲ. ಆದರೂ ಅವರು ತೆರೆ ಮೇಲೆ ಕಾಣಿಸಿಕೊಂಡು ಮೂರು ವರ್ಷವಾಗುತ್ತಾ ಬಂದಿದೆ. ‘ಐ ಲವ್ ಯು’ ಸಿನಿಮಾ ಬಳಿಕ ಇದೀಗ ‘ಹೋಮ್ ಮಿನಿಸ್ಟರ್’ ಆಗಿ ಉಪೇಂದ್ರ ಏ.1ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ! ಈ ಚಿತ್ರದಲ್ಲಿ ಹೊಸ ಅವತಾರದಲ್ಲೂ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆಯೇ ಆ್ಯಕ್ಷನ್ ಡ್ರಿಲ್ಲರ್ ಕಥಾಹಂದರದ ‘ಹೋಮ್ ಮಿನಿಸ್ಟರ್’ ಸೆಟ್ಟೇರಿತ್ತು. ಚಿತ್ರದಲ್ಲಿನ ತಮ್ಮ ಹೊಸ ಗೆಟ್‌ಅಪ್ ಅನ್ನೇ ಇದೀಗ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಫೊಟೊವಾಗಿ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಉಪೇಂದ್ರ ಅವರ ಈ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಹಲವು ಅಭಿಪ್ರಾಯಗಳನ್ನೂ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ನಟಿ ಪ್ರಿಯಾಂಕ ಉಪೇಂದ್ರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದವು. ‘ಕೋವಿಡ್ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಭಯವಿತ್ತು. ಈ ಪಾತ್ರವನ್ನು ಮಾಡಬಲ್ಲೆನೇ ಎನ್ನುವ ಸಂದೇಹವಿತ್ತು. ಜನ ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆಯೋ ಎಂದು ತಿಳಿದಿಲ್ಲ. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು ಭರವಸೆ ತುಂಬಿದರು’ ಎಂದು ಉಪೇಂದ್ರ ನೆನಪಿಸಿಕೊಂಡರು.

ಸುಜಯ್ ಕೆ. ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ವೇದಿಕ ನಟಿಸಿದ್ದು, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

Leave A Reply