Home News ಶಾಲಾ ಸಮವಸ್ತ್ರದಲ್ಲಿ ಬಸ್ಸಿನಲ್ಲಿಯೇ ಕುಳಿತುಕೊಂಡು ರಾಜಾರೋಷದಲ್ಲಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯರು !! | ಯಾವ ಕುಡುಕನಿಗೂ...

ಶಾಲಾ ಸಮವಸ್ತ್ರದಲ್ಲಿ ಬಸ್ಸಿನಲ್ಲಿಯೇ ಕುಳಿತುಕೊಂಡು ರಾಜಾರೋಷದಲ್ಲಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯರು !! | ಯಾವ ಕುಡುಕನಿಗೂ ಕಮ್ಮಿ ಇಲ್ಲದಂತೆ ಬಾಟಲ್ ಹಿಡಿದು ತೂರಾಡಿದ ಹೆಣ್ಮಕ್ಕಳ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು… ಇದು ಕನ್ನಡದ ಪ್ರಸಿದ್ಧ ಚಿತ್ರಗೀತೆ. ಈ ಚಿತ್ರಗೀತೆ ಇದೀಗ ತಮಿಳುನಾಡಿನಲ್ಲಿ ಪ್ರೂವ್ ಆಗಿದೆ. ತಮಿಳುನಾಡಿನ ತಿರುಕಝುಕುಂದ್ರಂ ನಿಂದ ಥಾಚೂರ್ ಮಾರ್ಗವಾಗಿ ತೆರಳುತ್ತಿದ್ದ ಬಸ್‍ನಲ್ಲಿ ಶಾಲಾ ಹೆಣ್ಣುಮಕ್ಕಳು ಮದ್ಯ ಸೇವಿಸಿ ಗಂಡಸರ ಹಾಗೆ ವರ್ತಿಸಿರುವ ವೀಡಿಯೋ ವೈರಲ್ ಆಗಿದೆ.

ಚೆಂಗ್ಲಪಟ್ಟು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಮದ್ಯ ಸೇವಿಸುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವಿದ್ಯಾರ್ಥಿಯೊಬ್ಬ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಿ ಇಂತಹ ಕೆಲಸ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಶಿಕ್ಷಣಾಧಿಕಾರಿ, ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಪೊಲೀಸರಿಂದಲೂ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಒಂದು ಸುತ್ತಿನ ತನಿಖೆ ನಡೆದಿದ್ದು, ಅಂತಹ ವಿದ್ಯಾರ್ಥಿಗಳ ವಿರುದ್ಧ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.