ಬಪ್ಪ ಬ್ಯಾರಿಯ ನಾಡಿನಲ್ಲಿ ಬ್ಯಾರಿಗಳಿಗಿಲ್ಲ ಅವಕಾಶ!! ಮುಸ್ಲಿಂ ವ್ಯಾಪಾರಿಗೆ ಒಲಿದ ದೇವಿಯ ಜಾತ್ರೆಯಲ್ಲಿ ಮುಸ್ಲಿಮರ ಅಂಗಡಿ ಮುಂಗಟ್ಟುಗಳು ನಿಷೇಧ
ಕರಾವಳಿಯಲ್ಲಿ ಹಿಜಾಬ್ ಕಿಡಿ ಹಬ್ಬಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ತೀರ್ಪಿನ ವಿರುದ್ಧ ನಿಂತ ಮುಸ್ಲಿಂ ಸಮುದಾಯವನ್ನು ಹಾಗೂ ಅವರ ವ್ಯಾಪಾರಗಳನ್ನು ಹಿಂದೂಗಳು ಬಹಿಷ್ಕರಿಸುವ ಮೂಲಕ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ.
ಹಿಂದೂ ದೇಗುಲಗಳ ಜಾತ್ರೆ ಸಂದರ್ಭ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ನಿರಾಕರಿಸಿ ಜಿಲ್ಲೆಯ ಕೆಲ ದೇಗುಲಗಳ ಆಡಳಿತ ಮಂಡಳಿ ಆದೇಶ ಹೊರಡಿಸಿದ ಬೆನ್ನಲ್ಲೇ ಇಂದು ಪ್ರಾರಂಭವಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪುರಾಣಗಳಲ್ಲಿ ಬಪ್ಪನಾಡು ಎಂಬ ಹೆಸರು ಬರಲು ಬಪ್ಪ ಬ್ಯಾರಿ ಎನ್ನುವ ವ್ಯಾಪಾರಿಯಿಂದ ಎಂಬುವುದು ಉಲ್ಲೇಖವಾಗಿದೆ.ಅಲ್ಲಿನ ದೇವಿ ಬಪ್ಪ ಬ್ಯಾರಿಗೆ ಒಲಿದು, ಆತನೇ ತನಗೆ ಆಲಯ ಕಟ್ಟಿಸಬೇಕು ಎಂದು ಕೋರಿಕೊಂಡ ಬಗ್ಗೆಯೂ, ಅರಸರ ಮುಖಾಂತರ ದೇವಾಲಯ ನಿರ್ಮಿತವಾಗಿ ಪ್ರತೀ ವರ್ಷ ಜಾತ್ರೆಯ ಸಂದರ್ಭ ಬಪ್ಪ ಬ್ಯಾರಿಯ ವಂಶಸ್ಥರು ಹಾಜರಿರಬೇಕು, ಪ್ರಸಾದ ಸ್ವೀಕರಿಸಬೇಕು ಎನ್ನುವತಿಂದೆ.
ಆದರೆ ಹಿಜಾಬ್ ಕಿಡಿ ಹೊತ್ತಿದ ಬಳಿಕ ಮುಸ್ಲಿಂಮರು ಒಂದು ದಿನದ ಮಟ್ಟಿಗೆ ವ್ಯಾಪಾರ ವಹಿವಾಟು ನಿಲ್ಲಿಸಿ ಪ್ರತಿಭತಿಸಿದ್ದರು. ಇದಕ್ಕೆ ಪ್ರತಿರೋಧವಾಗಿ ಹಿಂದೂ ಸಮುದಾಯ ಮುಸ್ಲಿಂ ಸಮುದಾಯದೊಂದಿಗೆ ವ್ಯಾಪಾರ, ವಹಿವಾಟು ನಡೆಸದಿರಲು ನಿರ್ಧರಿಸಿದ್ದು, ದೇವಾಲಯಗಳ ಜಾತ್ರೆಯಲ್ಲಿಯೂ ಅನುಮತಿ ನೀಡದೆ ಆದೇಶ ಹೊರಡಿಸಲಾಗಿದೆ. ಸದ್ಯ ಬಪ್ಪ ಬ್ಯಾರಿಯ ನಾಡಾದ ಬಪ್ಪನಾಡಿನಲ್ಲಿ ಮುಸ್ಲಿಂಮರನ್ನು ವಿರೋಧಿಸಿದ ಬಗ್ಗೆ ಕೆಲ ಹಿಂದೂಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಆಡಳಿತ ಮೊಕ್ತೇಸರರು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಉಳಿದ ದೇವಾಲಯಗಳಲ್ಲಿ ಅವಕಾಶ ನೀಡದೆ ಇರುವುದರಿಂದ ಯಾವ ಹಂತ ತಲುಪುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.