Home latest ಕುಂದಾನಗರಿಯನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು : ಮೂವರು ಹೆಂಡತಿಯರ ಮುದ್ದಿನ ಗಂಡನ ಕೊಲೆಯಲ್ಲಿ...

ಕುಂದಾನಗರಿಯನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು : ಮೂವರು ಹೆಂಡತಿಯರ ಮುದ್ದಿನ ಗಂಡನ ಕೊಲೆಯಲ್ಲಿ ಎರಡನೇ ಹೆಂಡತಿಯೇ ಮಾಸ್ಟರ್ ಮೈಂಡ್ !

Hindu neighbor gifts plot of land

Hindu neighbour gifts land to Muslim journalist

ಮಾರ್ಚ್ 15 ರಂದು ಇಡೀ ಕುಂದಾನಗರಿ ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ ನಡೆದಿತ್ತು. ಭವಾನಿ ನಗರದಲ್ಲಿ ವಾಕಿಂಗ್ ಗೆಂದು ಹೋಗಿದ್ದ ವ್ಯಕ್ತಿಯನ್ನು ಬೆಳ್ಳಂಬೆಳಿಗ್ಗೆ ರಸ್ತೆ ಬದಿಯಲ್ಲಿ ಭೀಕರವಾಗಿ ಹತ್ಯೆಮಾಡಲಾಗಿತ್ತು.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಆ ವ್ಯಕ್ತಿ ಮನೆಯಿಂದ ಎದ್ದು ಹೊರ ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಆತ ರಸ್ತೆಯ ಬದಿಯಲ್ಲಿಯೇ ರಕ್ತದ ಮಡುವಿನಲ್ಲಿ ಒದ್ದಾಡಿ, ಪ್ರಾಣ ಕಳೆದುಕೊಂಡಿದ್ದ. ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ ಜನ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದ ವ್ಯಕ್ತಿಯ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಇದೀಗ ಇದೇ ಕೇಸ್‌ನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವ ಆರೋಪಿ ಕೊಲೆಯಾದ ವ್ಯಕ್ತಿಯ ಹೆಂಡತಿ ಅನ್ನೋದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ.

ಅವತ್ತು ಅಲ್ಲಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದ ವ್ಯಕ್ತಿ ಹೆಸರು ರಾಜು ದೊಡ್ಡಬೊಮ್ಮನವರ್, ಸುಮಾರು 41 ವರ್ಷದ ರಾಜು, ರಿಯಲ್ ಎಸ್ಟೇಟ್ ಉದ್ಯಮಿ. ಮಾರ್ಚ್ 15ರಂದು ಭವಾನಿ ನಗರದಲ್ಲಿ ರಾಜು ಹತ್ಯೆಯಾಗಿತ್ತು. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು, ರಾಜು ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದು, ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳ ಬೆನ್ನು ಬಿದ್ದಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳ ಚಲನವಲನ ದಾಖಲಿಸಿಕೊಂಡಿದ್ದರು.

ರಾಜು ಹತ್ಯೆ ಹಿಂದೆ 2ನೇ ಹೆಂಡತಿ ಕೈವಾಡ ಇದೀಗ ಪೊಲೀಸರು ರಾಜು ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಆರೋಪಿ ಹತ್ಯೆಯಾಗಿದ್ದ ರಾಜು ಅವರ 2ನೇ ಹೆಂಡತಿ ಕಿರಣ ದೊಡ್ಡಬೊಮ್ಮನವರ್, ಮತ್ತಿಬ್ಬರು ರಾಜು ಬ್ಯುಸಿನೆಸ್ ಪಾರ್ಟ್‌ನರ್ ಶಶಿಕಾಂತ್ ಶಂಕರಗೌಡ ಹಾಗೂ ಧರ್ಮೇಂದ್ರ ಘಂಟೆ ಎಂಬುವರನ್ನು ಬಂಧಿಸಲಾಗಿದೆ.

ಮೃತ ರಾಜು ಮೂರು ಮದುವೆಯಾಗಿದ್ದ. ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ್ ಜೊತಗೆ ರಾಜು ವಿವಾಹ ಆಗಿದ್ದ. ಉಮಾ, ದೀಪಾ ಹಾಗೂ ಕಿರಣ ಎಂಬ ಮೂವರನ್ನು ಕೂಡಾ ಅಧಿಕೃತ ಮದುವೆ ಮಾಡಿಕೊಂಡು ಅವರಿಗೆ ಬೇರೆ ಬೇರೆ ಕಡೆ ಮನೆ ಮಾಡಿ ಇಟ್ಟಿದ್ದ. ಮೊದಲನೆಯ ಹೆಂಡತಿ ಬೆಂಗಳೂರಿನಲ್ಲಿದ್ರೆ, ಎರಡನೇ ಹೆಂಡತಿ ಟಿಳಕವಾಡಿ ನಗರದಲ್ಲಿದ್ದು, ಮೂರನೆಯ ಹೆಂಡತಿ ಬೆಳಗಾವಿಯ ಭವಾನಿ ನಗರದ ಸಂಸ್ಕೃತಿ ಫಾರ್ಮನಲ್ಲಿದ್ದಳು. ಇನ್ನು ಈತ ಮೂರನೆಯ ಹೆಂಡತಿ ದೀಪಾ ಜೊತೆಗೆ ಇರುತ್ತಿದ್ದ.

ಇನ್ನು ಮೂರು ವಿವಾಹದ ಕಾರಣಕ್ಕೆ ಗಂಡ, ಹೆಂಡತಿ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಮತ್ತೊಂದೆಡೆ ಲಾಭದಲ್ಲಿ ಪಾಲುದಾರರಿಗೆ ರಾಜು ಹಣ ನೀಡಿರಲಿಲ್ಲ ಎಂಬುದು ಪಾಲುದಾರರ ಸಿಟ್ಟಿಗೆ ಕಾರಣವಾಗಿತ್ತು. ಹಾಗಾಗಿ ಈ ಕಾರಣಕ್ಕೆ ರಾಜು ಹಾಗೂ ಪಾಲುದಾರರ ನಡುವೆ ವೈಮನಸ್ಸು ಉಂಟಾಗಿತ್ತು.

ಮನಸ್ತಾಪದಿಂದಾಗಿ ರಾಜು ಪತ್ನಿ ಕಿರಣ್ ಹಾಗೂ ಇಬ್ಬರ ಪಾರ್ಟ್‌ನರ್ ಸೇರಿಕೊಂಡು ರಾಜು ಹತ್ಯೆಗೆ ಸಂಚು ಮಾಡಿದ್ದಾರೆ. ಮೂರು ಜನರು 10 ಲಕ್ಷ ರೂಪಾಯಿಗೆ ಸುಪಾರಿ ನೀಡಿ, ರಾಜು ಕೊಲೆ ಮಾಡಿಸಿದ್ದಾರೆ.

ಇನ್ನು 2ನೇ ಪತ್ನಿ ಕಿರಣ್ ರಾಜು ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟು ಡ್ರಾಮ ಮಾಡಿದ್ದಳು. ಇದೀಗ ಮೂವರನ್ನು ಅರೆಸ್ಟ್ ಮಾಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.