ಮಿಕ್ಸ್ಚರ್ ತಿನ್ನುವಾಗ ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ಉಸಿರುಗಟ್ಟಿ ಸಾವು|

Share the Article

ಮಿಕ್ಸರ್ ಪ್ಯಾಕೇಟಿನಲ್ಲಿದ್ದ ಕಡಲೆಬೀಜ ತಿಂದು ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆಯೊಂದು ಕೇರಳದ ಕೊಯಿಕ್ಕೋಡ್‌ನ ನಾರತ್ ವೆಸ್ಟ್‌ನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ತಾನ್ವಿ ಎಂದು ಗುರುತಿಸಲಾಗಿದೆ. ಮೃತ ತಾನ್ವಿ, ಪ್ರವೀಣ್ ಮತ್ತು ಶರಣ್ಯಾ ದಂಪತಿಯ ಒಬ್ಬಳೇ ಮಗಳು.

ಕಣ್ಣೂರಿನಲ್ಲಿರುವ ಇಂಡಿಯನ್ ಪಬ್ಲಿಕ್ ಸ್ಕೂಲ್‌ನ ಕಿಂಡರ್ ಗಾರ್ಡನ್ ನಲ್ಲಿ ಕಲಿಯುತ್ತಿದ್ದ ಬಾಲೆ. ಒಬ್ಬಳೇ ಮಗಳನ್ನು ಕಡೆದುಕೊಂಡ ಪ್ರವೀಣ್-ಶರಣ್ಯಾ ದಂಪತಿ ದುಃಖ ಹೇಳತೀರದು.

ಈ ಘಟನೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಮಿಕ್ಸರ್ ಸ್ನ್ಯಾಕ್ಸ್ ತಿನ್ನುವಾಗ ಅದರಲ್ಲಿದ್ದ ಕಡಲೆಬೀಜ ತಾನ್ವಿಯ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ತಾನ್ವಿ ಕೊನೆಯುಸಿರೆಳೆದಿದ್ದಾಳೆ.

ಹೆಚ್ಚಿನ ಚಿಕಿತ್ಸೆಗಾಗಿ ಕೊಯಿಲ್ಯಾಂಡಿ ತಾಲೂಕು ಆಸ್ಪತ್ರೆಯಿಂದ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

Leave A Reply