ಕಾಸರಗೋಡು: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ !! | ಗೋವಾಗೆ ತೆರಳುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಸಾವು

Share the Article

ಬೈಕ್ ಹಾಗೂ ಲಾರಿ ನಡುವಿನ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ.

ಮೃತರನ್ನು ಮಲಪ್ಪುರಂನ ಜಂಶೀರ್ (22) ಮತ್ತು ಮುಹಮ್ಮದ್ ಶಿಬಿಲ್ (20) ಎಂದು ಗುರುತಿಸಲಾಗಿದೆ.

ಇಬ್ಬರು ಗೋವಾದಲ್ಲಿ ನಡೆಯಲಿರುವ ಐಎಸ್‌‌ಎಲ್ ಫುಟ್ಬಾಲ್ ಪೈನಲ್ ಪಂದ್ಯ ವೀಕ್ಷಿಸಲು ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಉದುಮ ಪಳ್ಳ ಎಂಬಲ್ಲಿ ಮುಂಜಾನೆ ಐದು ಗಂಟೆ ಸುಮಾರಿಗೆ ಕಾಸರಗೋಡು ಕಡೆಯಿಂದ ತೆರಳುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ.

ಇನ್ನು ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Leave A Reply