ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುತ್ತ ಚಾಕುವಿನಿಂದ ತನ್ನ ಎದೆಗೇ ಇರಿದ ಯುವಕ | ನಾಯಕ್ ನಹೀಂ ಖಳ್ ನಾಯಕ್ ಹೂಂ ಹೇಳುತ್ತಲೇ ಸಾವನ್ನಪ್ಪಿದ !

Share the Article

ಹೋಳಿ ಹಬ್ಬದ ದಿನದಂದು ಕುಡಿದು ಮೈಮರೆತು ಕುಣಿದು ಕುಪ್ಪಳಿಸುತ್ತಾ ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿದ್ದ ಯುವಕರ ಗುಂಪಿನಲ್ಲೊಬ್ಬ ಫೀಲಿಂಗ್ ಸಾಂಗ್ ಕೇಳುತ್ತಾ, ತನ್ನ ಕೈಲಿದ್ದ ಚಾಕುವಿನಿಂದ ತಾನೇ ತನ್ನ ಎದೆಗೆ ಇರಿದುಕೊಂಡು ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್‌ನ ಬಂಗಾಂಗ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದ್ ಕಾಲೋನಿಯಲ್ಲಿ ಹೋಳಿ ಆಚರಣೆ ಮಾಡುವಾಗ ಯುವಕನೊಬ್ಬ ಚಾಕು ಬಳಕೆ ಮಾಡಿ, ತನ್ನ ಜೀವವನ್ನು ತಾನೇ ತೆಗೆದಿದ್ದಾನೆ. ನಾಯಕ್ ನಾಯಕ್, ಖಳನಾಯಕ್ ಹೂಂ ಮೈನ್ ಎಂಬ ಸಿನಿಮಾ ಹಾಡಿಗೆ ಗೋಪಾಲ್ ಮತ್ತು ಆತನ ಸ್ನೇಹಿತರು ಕುಡಿದು ಕುಣಿಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply