Home Education ಹೆಣ್ಣು ಮಕ್ಕಳ ಖಾತೆಗೆ ಪ್ರತೀ ತಿಂಗಳು ಬೀಳಲಿದೆ ರೂ.1000|ವಿದ್ಯಾಭ್ಯಾಸದಿಂದ ಹೊರಗುಳಿಯುವುದನ್ನು ತಡೆಯಲೆಂದೆ ಜಾರಿಯಾಗಿದೆ ಈ ಯೋಜನೆ

ಹೆಣ್ಣು ಮಕ್ಕಳ ಖಾತೆಗೆ ಪ್ರತೀ ತಿಂಗಳು ಬೀಳಲಿದೆ ರೂ.1000|ವಿದ್ಯಾಭ್ಯಾಸದಿಂದ ಹೊರಗುಳಿಯುವುದನ್ನು ತಡೆಯಲೆಂದೆ ಜಾರಿಯಾಗಿದೆ ಈ ಯೋಜನೆ

Hindu neighbor gifts plot of land

Hindu neighbour gifts land to Muslim journalist

ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿರುವ ಹೆಣ್ಣು ಮಕ್ಕಳನ್ನು ತಡೆಯುವ ಉದ್ದೇಶದಿಂದ ವ್ಯಾಸಂಗ ಮುಗಿಸುವವರೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೇಳಿದ್ದು,ಈ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಆರ್ಥಿಕ ನೆರವಿನ ಘೋಷಣೆಯನ್ನು ಮಾಡಿದೆ.

ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವಾಗುವ ಈ ಯೋಜನೆಯನ್ನು ತಮಿಳುನಾಡು ಸರ್ಕಾರ ಹಮ್ಮಿಕೊಂಡಿದೆ.6 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರು ಈ ಆರ್ಥಿಕ ನೆರವಿನ ಮೂಲಕ ವಿದ್ಯಾಭ್ಯಾಸ ಮಾಡಬಹುದಾಗಿದೆ. ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ತಮಿಳುನಾಡು ರಾಜ್ಯದ 2022-23ನೇ ಸಾಲಿನ ಬಜೆಟ್ ಮಂಡಿನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ.

6 ರಿಂದ 12 ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಿಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮಾಸಿಕ ರೂ.1,000 / – ಪದವಿಪೂರ್ವ / ಪದವಿ / ವೃತ್ತಿಪರ ಅಧ್ಯಯನಗಳಲ್ಲಿ ನೇರವಾಗಿ ಜಮಾ ಮಾಡಲಾಗುತ್ತದೆ.ವಿದ್ಯಾರ್ಥಿಗಳು ಈಗಾಗಲೇ ಇತರ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರೂ, ಈ ಯೋಜನೆಯಡಿ ಹೆಚ್ಚುವರಿ ಸಹಾಯವನ್ನು ಪಡೆಯಬಹುದಾಗಿದೆ.

ಈ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವ ಅವಕಾಶವಿದ್ದು,ಈ ಹೊಸ ಉಪಕ್ರಮಕ್ಕೆ ಬಜೆಟ್‌ನಲ್ಲಿ 698 ಕೋಟಿ ಮೀಸಲಿಡಲಾಗಿದೆ.ಸಚಿವ ಪಳನಿವೇಲ್ ತ್ಯಾಗರಾಜನ್ ಮಾತನಾಡಿ, 38 ಜಿಲ್ಲೆಗಳಲ್ಲಿ 1.8 ಲಕ್ಷ ಸ್ವಯಂಸೇವಕರನ್ನು ಜೊತೆಗೂಡಿಸಿಕೊಂಡು ವಿಶೇಷ ಪ್ರಾಯೋಗಿಕ ಶಿಕ್ಷಣ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಿರುವ ಕಾರಣದಿಂದ ಈ ಧನಸಹಾಯ ಯೋಜನೆಯನ್ನು ಜಾರಿಗೊಳಿಸಿದೆ.