Home News ಹದಿಹರೆಯದ ಯುವತಿಯರ ಮಾಡೆಲಿಂಗ್ ಕ್ಷೇತ್ರದ ಹುಚ್ಚು- ಅನುಭವಿಸಿದ್ದು ಮಾತ್ರ ಟಾರ್ಗೆಟ್ ಗ್ಯಾಂಗ್!! ಮಸಾಜ್ ಪಾರ್ಲರ್ ಹೆಸರಿನಲ್ಲಿ...

ಹದಿಹರೆಯದ ಯುವತಿಯರ ಮಾಡೆಲಿಂಗ್ ಕ್ಷೇತ್ರದ ಹುಚ್ಚು- ಅನುಭವಿಸಿದ್ದು ಮಾತ್ರ ಟಾರ್ಗೆಟ್ ಗ್ಯಾಂಗ್!! ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ಹಸಿ ಮಾಂಸ ದಂಧೆಯಲ್ಲಿ ಅಮಾಯಕ ಯುವತಿಯರು

Hindu neighbor gifts plot of land

Hindu neighbour gifts land to Muslim journalist

ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಹೊಸ ಇತಿಹಾಸ ನಿರ್ಮಿಸಬೇಕು, ಕ್ಯಾಟ್ ವಾಕ್, ರಾಂಪ್ ವಾಕ್ ಹೀಗೆ ವಿಭಿನ್ನ ರೀತಿಯ ನಡಿಗೆ-ಉಡುಗೆಯಲ್ಲಿ ಜನರನ್ನು ರಂಜಿಸಬೇಕೆಂಬ ಕನಸು ಹೊತ್ತು ಬಂದಿದ್ದ ಹದಿಹರೆಯದ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ವಿಚಾರಣೆಯ ಬಳಿಕ ಯುವತಿಯರನ್ನು ಜಾಲಕ್ಕೆ ತಳ್ಳಿದ ಇಬ್ಬರು ಪಿಂಪ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ತಮಿಳುನಾಡಿನ ಚೆನ್ನೈ ನಲ್ಲಿ ಇಂತಹ ಗ್ಯಾಂಗ್ ಒಂದು ಕಾರ್ಯಾಚರಿಸುತ್ತಿತ್ತು.ಮಾಡೆಲಿಂಗ್ ಹಾಗೂ ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದು ಜನರನ್ನು ಅದರಲ್ಲೂ ಹದಿಹರೆಯದ ಯುವತಿಯರನ್ನು ನಂಬಿಸಿ ತರಬೇತಿ ನೀಡುವ ನೆಪದಲ್ಲಿ ಕರೆತಂದು ಹೋಟೆಲ್ ಗಳಲ್ಲಿ, ಕ್ಲಬ್ ಗಳಲ್ಲಿ, ಮಸಾಜ್ ಪಾರ್ಲರ್ ಗಳಲ್ಲಿ ವೇಶ್ಯವಾಟಿಕೆಗೆ ತಳ್ಳಿ ಕಿರುಕುಳ ನೀಡುತ್ತಿದ್ದ ಬಗ್ಗೆ ನೊಂದ ಯುವತಿಯರು ಅಳಲು ತೋಡಿಕೊಂಡಿದ್ದರು.

ಹೇಗೂ ಉದ್ಯೋಗದ ಸಮಸ್ಯೆ, ಮಾಡೆಲಿಂಗ್ ರಂಗದ ಹುಚ್ಚು ಯುವತಿಯರನ್ನು ಆ ಕಡೆಗೆ ಸೆಳೆಯುತ್ತಿರುವುದು ಈ ಖತರ್ನಾಕ್ ಗ್ಯಾಂಗ್ ಗೆ ಪ್ಲಸ್ ಪಾಯಿಂಟ್ ಆಗಿತ್ತು. ಅದೇ ಕಾರಣದಿಂದಾಗಿ ಅನೇಕ ಯುವತಿಯರು ಜಾಲದ ಬಲೆಗೆ ಬೀಳುತ್ತಿದ್ದರು.ಈ ರೀತಿ ಮಾತ್ರವಲ್ಲದೆ, ಯುವತಿಯರೊಂದಿಗೆ, ಮಹಿಳೆಯರೊಂದಿಗೆ ಸ್ನೇಹ ಸಲುಗೆ ಬೆಳೆಸಿ, ಹಣದ ಆಮಿಷವೊಡ್ಡಿ ಈ ದಂಧೆಗೆ ಬೀಳಿಸಲಾಗುತ್ತಿತ್ತು ಎನ್ನುವ ಬೆಚ್ಚಿ ಬೀಳಿಸುವ ಸತ್ಯವು ಪೊಲೀಸರ ವಿಚಾರಣೆಯ ಬಳಿಕ ಬಹಿರಂಗವಾಗಿದೆ.

ಸದ್ಯ ಆರೋಪಿಗಳ ಬಂಧನವಾಗಿದ್ದು, ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾದ ಆರೋಪಿಗಳ ಹಾಗೂ , ದಲ್ಲಾಳಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.